ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಕಾರ್ಯಸಾಧುವಲ್ಲದ ಸಲಹೆ

Last Updated 3 ಮೇ 2022, 19:30 IST
ಅಕ್ಷರ ಗಾತ್ರ

ಉತ್ತರಪ್ರದೇಶದ ಅಲಿಗಡ ‍ಪಟ್ಟಣದಲ್ಲಿ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ, ಕಾಳಿಚರಣ್ ಮಹಾರಾಜ್ ಸ್ವಾಮೀಜಿ ಮತ್ತು ನರಸಿಂಹಾನಂದ ಸರಸ್ವತಿ ಅವರು ‘ಹಿಂದೂ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹೆರಬೇಕು’ ಎಂದು ಕಾರ್ಯಸಾಧುವಲ್ಲದ ಮತ್ತು ಸರ್ಕಾರದ ನೀತಿಗೆ ವಿರುದ್ಧವಾದ ಹೇಳಿಕೆ ನೀಡಿರುವುದು ವರದಿಯಾಗಿದೆ (ಪ್ರ.ವಾ., ಮೇ 3). ಬೇರೆ ಬೇರೆ ಸ್ವಾಮೀಜಿಗಳು ಹಾಗೂ ಸ್ವಯಂಘೋಷಿತ ಮುಖಂಡರು ಆಗಾಗ್ಗೆ ಇಂಥ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಒಂದು ಮಗುವಿನ ಪಾಲನೆ- ಪೋಷಣೆ, ಆರೋಗ್ಯ, ಶಿಕ್ಷಣ, ಉದ್ಯೋಗ ಎಷ್ಟು ಕಷ್ಟ ಎಂಬುದು ಸಂಸಾರಿಗಳಿಗೆ ಗೊತ್ತೇ ವಿನಾ ಸಂಸಾರ ತ್ಯಜಿಸಿರುವ ಸ್ವಾಮೀಜಿಗಳಿಗೆ ಗೊತ್ತಾಗುವುದಿಲ್ಲ.

ಈ ಸ್ವಾಮೀಜಿಗಳು ಹಿಂದೂ ಮಕ್ಕಳ ಪಾಲನೆ-ಪೋಷಣೆ, ಆರೋಗ್ಯ, ಶಿಕ್ಷಣ, ಉದ್ಯೋಗ ಈ ಎಲ್ಲದರ ಪೂರ್ಣ ಜವಾಬ್ದಾರಿ ಹೊರುವ ವ್ಯವಸ್ಥೆ ಮಾಡಿಕೊಂಡು, ಆನಂತರ ಈ ಹೇಳಿಕೆಯನ್ನು ನೀಡಿದರೆ ಆ ಮಾತಿಗೆ ಘನತೆ, ತೂಕ ಲಭಿಸುತ್ತದೆ. ಅದು ಬಿಟ್ಟು ಪುಕ್ಕಟೆ ಸಲಹೆ ಕೊಡುವುದರಿಂದ ಯಾವ ಕಾರ್ಯವೂ ಸಾಧಿತವಾಗುವುದಿಲ್ಲ.

- ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT