ಭಾನುವಾರ, ಜೂನ್ 26, 2022
21 °C

ಸ್ಮಾರ್ಟ್ ಫೋನ್‌ ಉಚಿತವಾಗಿ ವಿತರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್ ಸಂಕಷ್ಟದ ಸಮಯದಲ್ಲಿ ಎಸ್ಎಸ್ಎಲ್‌ಸಿ ಮಕ್ಕಳಿಗಾಗಿ ರಾಜ್ಯದ ಹಲವು ಶೈಕ್ಷಣಿಕ ಜಿಲ್ಲೆಗಳಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ತಂಡ ಗೂಗಲ್ ಫಾರ್ಮ್ ಮೂಲಕ ವಿಷಯವಾರು ರಸಪ್ರಶ್ನೆಗಳನ್ನು ತಯಾರಿಸಿ, ವಿದ್ಯಾರ್ಥಿಗಳು ಉತ್ತರಿಸುವಂತೆ ಮಾಡುತ್ತಿರುವುದು ಉತ್ತಮ ಕ್ರಮ. ಆದರೆ ಎಲ್ಲ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕೆಂದು ಶಿಕ್ಷಕರ ಮೇಲೆ ಒತ್ತಡ ಹೇರುತ್ತಿರುವುದು ಸರಿಯಲ್ಲ. ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಪೋಷಕರಲ್ಲಿ ಹೆಚ್ಚಿನವರ ಬಳಿ ಸ್ಮಾರ್ಟ್ ಫೋನ್ ಇರುವುದಿಲ್ಲ. ಒಂದು ವೇಳೆ ಇದ್ದರೂ ದುಡಿಮೆಯಿಲ್ಲದ ಕಾರಣ ಡೇಟಾ ಪ್ಯಾಕ್ ರಿಚಾರ್ಜ್ ಮಾಡಿಸುವಷ್ಟು ಹಣ ಹೊಂದಿರುವುದಿಲ್ಲ.

ಈ ಬಗ್ಗೆ ಪೋಷಕರ ಮನವೊಲಿಸಲು ಹೋದರೆ ‘ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ಅಂದಂಗೆ ಸ್ವಾಮಿ’ ಎನ್ನುತ್ತಾರೆ. ಹಾಗಾಗಿ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಯ ಮಕ್ಕಳಿಗೆ ಸ್ಮಾರ್ಟ್ ಫೋನ್‌ಗಳನ್ನು ಉಚಿತವಾಗಿ ವಿತರಿಸುವುದರ ಜೊತೆಗೆ ಪರೀಕ್ಷೆ ಮುಗಿಯುವವರೆಗೆ ಉಚಿತ ಡೇಟಾ ಪ್ಯಾಕ್ ನೀಡಿ ಸಹಕರಿಸಲಿ. ಇದರಿಂದ ಅಧಿಕಾರಿಗಳ ಶ್ರಮಕ್ಕೆ ಬೆಲೆ ಸಿಗುತ್ತದೆ. ಶಿಕ್ಷಕರು ಒತ್ತಡರಹಿತವಾಗಿ ಕಾರ್ಯನಿರ್ವಹಿಸಬಹುದು ಹಾಗೂ ಎಲ್ಲ
ವಿದ್ಯಾರ್ಥಿಗಳಿಗೂ ತಂತ್ರಜ್ಞಾನ ಆಧಾರಿತ ಕಲಿಕೆಯ ಪ್ರಯೋಜನ ದೊರಕುತ್ತದೆ.

-ಪುಟ್ಟದಾಸು, ಮಂಡ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು