ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಾರಿಗಳ ನಡುವೆ ತಾರತಮ್ಯವೇಕೆ?

Last Updated 1 ಜೂನ್ 2021, 17:14 IST
ಅಕ್ಷರ ಗಾತ್ರ

ಲಾಕ್‍ಡೌನ್‌ನ ಈ ಸಮಯದಲ್ಲಿ ಕಿರಾಣಿ, ಕಾಯಿಪಲ್ಲೆ, ಕಟ್ಟಡ ನಿರ್ಮಾಣ ಸಾಮಗ್ರಿ, ಮಾಂಸ ಮತ್ತು ಮದ್ಯದಂತಹ ಕೆಲವು ಅಂಗಡಿಗಳಿಗೆ ವ್ಯಾಪಾರಕ್ಕೆ ಕೆಲವೇ ತಾಸುಗಳ ಅವಕಾಶ ಕಲ್ಪಿಸಲಾಗಿದೆ. ಉಳಿದ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಪೂರ್ತಿಯಾಗಿ ಬಂದ್ ಮಾಡಬೇಕಾಗಿದೆ. ಆದರೆ ಇ-ಕಾಮರ್ಸ್‌ ಸಂಸ್ಥೆಗಳು ಮಾತ್ರ ತಮ್ಮ ವಸ್ತುಗಳನ್ನು ದಿನವಿಡೀ ಜನರಿಗೆ ಪೂರೈಸುತ್ತಿದ್ದು ಅವುಗಳ ವ್ಯಾಪಾರ ವೃದ್ಧಿಯಾಗಿದೆ. ಭವಿಷ್ಯದಲ್ಲಿ ಜನರಿಗೆ
ಇದೇ ರೂಢಿಯಾಗಿ, ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ವಹಿವಾಟಿನಲ್ಲಿ ತೀವ್ರ ಹೊಡೆತ ಬೀಳುವ ಆತಂಕ ಮನೆ
ಮಾಡುತ್ತಿದೆ. ಈ ನೀತಿಯು ಇ– ಕಾಮರ್ಸ್‌ ವ್ಯಾಪಾರಿಗಳು ಮತ್ತು ಸಾಮಾನ್ಯ ವ್ಯಾಪಾರಸ್ಥರ ನಡುವೆ ತಾರತಮ್ಯ ಉಂಟು ಮಾಡುತ್ತಿದೆ.

ದೇಶದಲ್ಲಿ ಕೃಷಿಯ ನಂತರ ಹೆಚ್ಚಿನ ಜನರಿಗೆ ಉದ್ಯೋಗ ಕೊಡುವುದು ಚಿಲ್ಲರೆ ವ್ಯಾಪಾರ. ಕೋವಿಡ್‌ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ವ್ಯಾಪಾರಸ್ಥರ ಹಿತ ಕಾಯುವ ನೀತಿಗಳನ್ನು ರೂಪಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹತ್ವದ ಪಾತ್ರ ವಹಿಸಬೇಕು.

-ಉದಯ ಮ. ಯಂಡಿಗೇರಿ,ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT