ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕಾಗಿದೆ ಇತಿಹಾಸ ಸೃಷ್ಟಿಸುವ ತೀರ್ಪು

Last Updated 11 ಜೂನ್ 2019, 20:00 IST
ಅಕ್ಷರ ಗಾತ್ರ

ನೂತನ ಸಂಸತ್‌ ಸದಸ್ಯರ ಅಪರಾಧ ಚರಿತ್ರೆ ಕುರಿತ ಕೆ.ವಿ.ಧನಂಜಯ ಅವರ ಲೇಖನ (ಪ್ರ.ವಾ., ಜೂನ್ 10) ಮಾಹಿತಿಪೂರ್ಣವಾಗಿದೆ.ರಾಜಕಾರಣಿಗಳು ಹಣ ಬಲದಿಂದ ಕಾನೂನನ್ನು ತಮಗೆ ಬೇಕಾದಂತೆ ತಿರುಚಿ ಶೋಷಣೆಗೆ ಒಳಪಡಿಸುತ್ತಲೇ ಇದ್ದಾರೆ. ಇದಲ್ಲದೆ ಸರ್ಕಾರಗಳು ಕೋರ್ಟಿನ ಆದೇಶಗಳನ್ನು ನಿರ್ಲಕ್ಷಿಸುವುದು ಸರ್ವೇಸಾಮಾನ್ಯವಾಗಿದೆ.

ಹೀಗಾಗಿ ‘ರಾಜಕಾರಣ ಎಂಬುದು ದುಷ್ಟರ ಕಡೆಯ ಆಶ್ರಯತಾಣ’ ಎಂಬ ಮಾತು ನೆನಪಾಗುತ್ತದೆ. ಇದು ಎಲ್ಲ ರಾಜಕಾರಣಿಗಳಿಗೆ ಅನ್ವಯಿಸುವುದಿಲ್ಲವಾದರೂ, ಅಪರಾಧ ಹಿನ್ನೆಲೆಯ ಶೇ 43ರಷ್ಟು ಸದಸ್ಯರುಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಯಶಾಲಿಗಳಾಗಿರುವುದು ಗಾಬರಿ ಹುಟ್ಟಿಸುವಂತಹದ್ದು.

ಹೀಗೆ ಆಯ್ಕೆಯಾದವರು ಎಂತಹ ಸಮಾಜವನ್ನು ಕಟ್ಟಿಯಾರು? ಇಂತಹವರನ್ನೆಲ್ಲಾ ‘ಜಯಶಾಲಿ’ಗಳು ಎಂದು ಹೇಳಬಹುದೇ ಎಂಬ ಕುರಿತು ಸುಪ್ರೀಂ ಕೋರ್ಟ್ ಇನ್ನು ಕೆಲವೇ ದಿನಗಳಲ್ಲಿ ಮಹತ್ವದ ತೀರ್ಪು ನೀಡಲಿದೆಯಂತೆ. ದುರ್ಬಲಗೊಳ್ಳುತ್ತಲೇ ಹೋಗುತ್ತಿರುವ ಪ್ರಜಾತಂತ್ರಕ್ಕೆ, ಇತಿಹಾಸವನ್ನೇ ಸೃಷ್ಟಿಸಬಲ್ಲ ಇಂತಹ ತೀರ್ಪುಗಳು ತುರ್ತಾಗಿ ಬೇಕಾಗಿರುವ ಕಾಲವಿದು.

-ಸಿದ್ರಾಮಪ್ಪ ದಿನ್ನಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT