ಗುರುವಾರ , ಜೂನ್ 24, 2021
27 °C

ನಿರುದ್ಯೋಗಿಗಳಿಗೆ ಕಾರ್ಯಯೋಜನೆ ರೂಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಆರ್ಥಿಕತೆ: ಬೇಕು ದೃಢ ಹೆಜ್ಜೆ’ ಲೇಖನದಲ್ಲಿ (ಪ್ರ.ವಾ., ಜುಲೈ 4) ಪ್ರೊ. ಎಂ.ಬಾಲಚಂದ್ರ ಗೌಡ ಅವರು ದೇಶವು ಈಗ ಪ್ರಮುಖವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಿದ್ದಾರೆ. ಜನರ ಆರೋಗ್ಯ ರಕ್ಷಣೆ ಮಾಡುತ್ತಾ ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳಲು ಪ್ರಯತ್ನಿಸಬೇಕಿದೆ. ಈಗಾಗಲೇ ನಗರಗಳಿಂದ ಗ್ರಾಮಗಳಿಗೆ ಹಿಂತಿರುಗಿರುವ ಲಕ್ಷಾಂತರ ಗ್ರಾಮೀಣ ಬಡ ಮತ್ತು ನಿರುದ್ಯೋಗಿಗಳಿಗಾಗಿ ಕಾರ್ಯಯೋಜನೆ ರೂಪಿಸಿ ಜಾರಿಗೆ ತರಬೇಕು.

ವಲಸೆ ಬಂದ ಕಾರ್ಮಿಕರು ನಿರುದ್ಯೋಗಿಗಳ ಪಡೆಯಲ್ಲಿ ಸೇರದಿರಲು ಅವರಿಗೆ ಕೌಶಲ ತರಬೇತಿ ನೀಡಿದರೆ ಉತ್ತಮ. ಸ್ಥಳೀಯ ಕೆಲಸಗಳಿಗೆ ಒತ್ತು ನೀಡಬೇಕು. ಕೃಷಿ ರಂಗದ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ರಸ್ತೆ ನಿರ್ಮಾಣ, ಕೆರೆಗಳ ಹೂಳೆತ್ತುವುದು, ವಿದ್ಯುತ್ ಸೌಲಭ್ಯ, ಒಳಚರಂಡಿ, ಕುಡಿಯುವ ನೀರು, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಇತ್ಯಾದಿಗಳಿಗೆ ಅವಶ್ಯಕ ತರಬೇತಿ ನೀಡಬೇಕು. ಪಡಿತರ ವ್ಯವಸ್ಥೆಯ ಮೂಲಕ ಮೂಲ ಅವಶ್ಯಕತೆಗಳನ್ನು ಪೂರೈಸುವ ವ್ಯವಸ್ಥೆ ಮುಂದುವರಿಯಬೇಕು.

- ಬಿ.ಆರ್.ಅಣ್ಣಾಸಾಗರ, ಸೇಡಂ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು