ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರು ದೂರು ನೀಡುವ ವ್ಯವಸ್ಥೆ ಇರಲಿ

Last Updated 28 ಏಪ್ರಿಲ್ 2019, 18:30 IST
ಅಕ್ಷರ ಗಾತ್ರ

ಪ್ರತಿವರ್ಷ ಮೇ ಒಂದರಂದು ಕಾರ್ಮಿಕರ ದಿನಾಚರಣೆ ಇರುತ್ತದೆ. ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಕಾರ್ಮಿಕರಿಗೆ ಎಲ್ಲಾ ರೀತಿಯ ಸೌಕರ್ಯ ಇರುತ್ತದೆ. ಒಂದು ವೇಳೆ ಅವರಿಗೆ ಏನಾದರೂ ತೊಂದರೆಯಾದರೆ ಕಾನೂನು ರೀತಿ ಹೋರಾಡುವಷ್ಟು ಸಂಘಟಿತರಾಗಿರುತ್ತಾರೆ. ಆದರೆ, ಸಣ್ಣಪುಟ್ಟ ಸಂಸ್ಥೆಗಳಲ್ಲಿ ತಮ್ಮ ಅನನುಕೂಲವನ್ನು ಹೇಳಿಕೊಂಡರೆ ಕೆಲಸ ಕಳೆದುಕೊಳ್ಳುವ ಭೀತಿ ಇರುತ್ತದೆ. ಕೆಲವು ಗಾರ್ಮೆಂಟ್ಸ್‌ನಲ್ಲಂತೂ ಹೆಣ್ಣು ಮಕ್ಕಳು ಕನಿಷ್ಠ ಸೌಲಭ್ಯಗಳಿಂದಲೂ ವಂಚಿತರಾಗಿ, ಜೀವನ ನಿರ್ವಹಣೆಗಾಗಿ ಅನಿವಾರ್ಯವಾಗಿ ಉದ್ಯೋಗ ಮಾಡುತ್ತಿರುತ್ತಾರೆ.

ಕಾರ್ಮಿಕರು ತಮಗೆ ತೊಂದರೆಯಾದರೆ ದೂರು ನೀಡಲು ಅನುವಾಗುವಂತಹ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಧೈರ್ಯವಾಗಿ ದೂರು ಕೊಡುವಂತಹ ಪರಿಸ್ಥಿತಿ ನಿರ್ಮಿಸಬೇಕು. ಈ ರೀತಿ ಮಾಡಿದರೆ ಕಾರ್ಮಿಕರ ದಿನಾಚರಣೆಗೆ ಅರ್ಥ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT