ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪಕ್ಷಾಂತರದ ಪಾಪ ತೊಳೆದದ್ದು ಹಣಬಲ?!

Last Updated 8 ನವೆಂಬರ್ 2022, 19:32 IST
ಅಕ್ಷರ ಗಾತ್ರ

ತೆಲಂಗಾಣದ ಮುನುಗೋಡು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಾಂತರಗೊಂಡು ಸ್ಪರ್ಧಿಸಿದ್ದ ಅಭ್ಯರ್ಥಿ ಸೋಲು ಕಂಡಿ ರುವುದು ಇತರ ಪಕ್ಷಾಂತರಿಗಳಿಗೆ ಎಚ್ಚರಿಕೆಯ ಗಂಟೆ ಎಂದು ಹುರುಕಡ್ಲಿ ಶಿವಕುಮಾರ ಅವರ ಹೇಳಿರುವುದರಲ್ಲಿ (ವಾ.ವಾ., ನ. 8) ತುಸು ಪ್ರಮಾದ ಇದೆ. ಈ ಫಲಿತಾಂಶ ಪಕ್ಷಾಂತರಕ್ಕೆ ಪಾಠವೇನೋ ಸರಿ. ಆದರೆ, ಮುನುಗೋಡು ಕ್ಷೇತ್ರದಲ್ಲಿ ಆಡಳಿತ ಪಕ್ಷವು ತನ್ನ ಪ್ರತಿಷ್ಠೆಯನ್ನೇ ಪಣಕ್ಕಿಟ್ಟು ಗೆಲುವು ಸಾಧಿಸಿದ್ದು ಪ್ರಜಾಪ್ರಭುತ್ವದ ಬಲದಿಂದಲ್ಲ. ನೂರಾರು ಕೋಟಿ ರೂಪಾಯಿ ಚೆಲ್ಲಿದ್ದರ ಬಲದಿಂದ ಎಂಬ ವರದಿಗಳೂ ಇವೆ. ಹೀಗಾಗಿ, ಪಕ್ಷಾಂತರದ ಪಾಪ ತೊಳೆದದ್ದು ಮತದಾರನ ಪುಣ್ಯದ ಫಲದಿಂದೇನಲ್ಲ, ಹಣದಾಸೆಯ ಮತ್ತೊಂದು ಪಾಪದಿಂದ ಎನ್ನಬಹುದು. ಈ ಹಣವನ್ನು ಪಡೆದವರು ಅಮಾಯಕರೂ ಅಬೋಧರೂ ಏನಲ್ಲ. ಯಥಾರಾಜಾ ತಥಾಪ್ರಜಾ ಎಂಬುದು ಯಥಾಪ್ರಜಾ ತಥಾರಾಜಾ ಎಂದಾದ ವಿದ್ಯಮಾನದಲ್ಲಿ, ರಾಜಕಾರಣದ ಅಸಹ್ಯಗಳಿಂದ ಪ್ರಜಾಬಾಧ್ಯತೆಯನ್ನು ಹೊರಗಿಡುವುದು ಸಲ್ಲದು.

–ಕೆ.ಪುರುಷೋತ್ತಮ ರೆಡ್ಡಿ, ಪಾವಗಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT