ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರುವವರು ಯಾರು?

Last Updated 21 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಮೈಸೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ವಿವಿಧ ಪಕ್ಷಗಳ ಕೆಲವು ಕಾರ್ಯಕರ್ತರು ಹಾಗೂ ಪಾಲಿಕೆಯ ಹಾಲಿ ಸದಸ್ಯರು ಪಕ್ಷಾಂತರ ಮಾಡುವುದು ಅಥವಾ ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವುದು ನಡೆದಿದೆ.

ಟಿಕೆಟ್ ಸಿಗುವುದಿಲ್ಲ ಎಂದು ಗೊತ್ತಾದೊಡನೆ ಪಕ್ಷಾಂತರ ಮಾಡುವ ಸದಸ್ಯರನ್ನು ಯಾವ ಪಟ್ಟಿಗೆ ಸೇರಿಸಬಹುದು? ತಮ್ಮ ಪಕ್ಷವು ಯಾರಿಗೆ ಟಿಕೆಟ್ ಕೊಡುತ್ತದೆಯೋ ಅವರ ಪರವಾಗಿ ಕೆಲಸ ಮಾಡುವುದು ಪಕ್ಷದ ಎಲ್ಲಾ ಸದಸ್ಯರ ಮತ್ತು ನಾಯಕರ ಕರ್ತವ್ಯ. ಪಕ್ಷಾಂತರ ಮಾಡುತ್ತಿರುವ ಸದಸ್ಯರ ನಡವಳಿಕೆಯನ್ನು ನೋಡುತ್ತಿದ್ದರೆ ಇವರಿಗೆಲ್ಲ ಟಿಕೆಟ್ ತಪ್ಪಿದ್ದೇ ಸರಿ ಅನಿಸುವುದಿಲ್ಲವೇ?

ಎಲ್ಲರೂ ಪಲ್ಲಕ್ಕಿಯ ಮೇಲೆ ಕೂರಲು ಬಯಸುವವರೇ ಆದರೆ ಪಲ್ಲಕ್ಕಿಯನ್ನು ಹೊರುವವರು ಯಾರು ಎಂಬುದೇ ಈಗ ಉದ್ಭವಿಸಿರುವ ಪಶ್ನೆ!

-ಪಿ.ಜೆ. ರಾಘವೇಂದ್ರ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT