ಶುಕ್ರವಾರ, ಜುಲೈ 1, 2022
26 °C

ವಾಚಕರ ವಾಣಿ| ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಇತ್ತೀಚೆಗೆ ಕೆಲವು ಸರ್ಕಾರಿ ಅಧಿಕಾರಿಗಳು ಹಾಗೂ ದಲ್ಲಾಳಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ನಗದು, ಚಿನ್ನ– ಬೆಳ್ಳಿ ಆಭರಣ ಹಾಗೂ ಆಸ್ತಿಪಾಸ್ತಿಗಳ ದಾಖಲೆ ವಶಪಡಿಸಿಕೊಂಡಿರುವುದರ ಬಗ್ಗೆ ವರದಿಯಾಗಿದೆ. ಈ ಹಿಂದೆಯೂ ಎಸಿಬಿ ಹಲವಾರು ದಾಳಿಗಳನ್ನು ನಡೆಸಿ ಅಕ್ರಮ ಗಳಿಕೆಯನ್ನು ಪತ್ತೆಹಚ್ಚಿದೆ. ಇತ್ತೀಚಿನ ವರ್ಷಗಳಲ್ಲಿ ಎಸಿಬಿ ಸ್ವಲ್ಪಮಟ್ಟಿಗೆ ಚುರುಕುಗೊಂಡಿದೆ ಎಂದು ಹೇಳಬಹುದು. ಆದರೆ, ಎಸಿಬಿ ಹೂಡುವ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣ ಮಾತ್ರ ಅತ್ಯಂತ ಕಡಿಮೆ. ಬಹುತೇಕ ಆರೋಪಿಗಳು ರಾಜಕೀಯ ಪ್ರಭಾವ ಬಳಸಿಕೊಂಡು, ಶಿಕ್ಷೆಯಿಂದ ಪಾರಾಗುತ್ತಾರೆ. ಕೆಲವರು ಮತ್ತೆ ಆಯಕಟ್ಟಿನ ಸ್ಥಳಗಳಲ್ಲಿ ಬಂದು ಕುಳಿತುಕೊಳ್ಳುತ್ತಾರೆ.

ಕೆಲವು ಅಧಿಕಾರಿಗಳ ಮನೆಯಲ್ಲಿ ವಶಪಡಿಸಿಕೊಂಡಿರುವ ನಗದು ಮತ್ತು ಕೆಜಿಗಟ್ಡಲೆ‌ ಚಿನ್ನಾಭರಣಗಳನ್ನು ನೋಡಿದರೆ ಯಾರಿಗಾದರೂ ಬೆರಗಾಗದಿರದು. ಎಸಿಬಿ ದಾಖಲಿಸುವ ಪ್ರಕರಣಗಳಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಹಸ್ತಕ್ಷೇಪ ಇರಬಾರದು. ಪ್ರಕರಣವು ನ್ಯಾಯಾಲಯದಿಂದ ಹೊರಬರುವವರೆಗೆ, ಭ್ರಷ್ಟ ಅಧಿಕಾರಿಗಳನ್ನು ಪುನರ್‌ನೇಮಕ ಮಾಡಿಕೊಳ್ಳಬಾರದು. ಭ್ರಷ್ಟ ಅಧಿಕಾರಿಗಳನ್ನು ಸರ್ಕಾರವೇ ರಕ್ಷಿಸಿದರೆ ಎಸಿಬಿ ಏಕೆ ಬೇಕು?

- ಕೆ.ವಿ. ವಾಸು, ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು