ಮಂಗಳವಾರ, ಜೂನ್ 22, 2021
28 °C

ವೋಟಿಗಾಗಿ ನೋಟು... ಈಗ ಕೊಡಿ!

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ಲಾಕ್‌ಡೌನ್ ಇರುವುದರಿಂದ ಜನರಿಗೆ ಕೆಲಸ ಕಾರ್ಯಗಳು ಇಲ್ಲದೆ ಜೀವನ ನಡೆಸುವುದು ತುಂಬಾ ಕಷ್ಟವಾಗಿದೆ. ಚುನಾವಣೆಯ ಸಂದರ್ಭದಲ್ಲಿ ಚುನಾವಣೆಗೆ ಸ್ಪರ್ಧಿಸುವ ನಾಯಕರು ಮತ್ತು ಅವರ ಬೆಂಬಲಿಗರು ವೋಟಿಗಾಗಿ ಬಡಜನರ ಮನೆಮನೆಗೂ ಹೋಗಿ, ಅವರ ಯೋಗಕ್ಷೇಮ ವಿಚಾರಿಸುತ್ತಾರೆ. ವೋಟಿಗಾಗಿ ನೋಟು ಜೊತೆಗೆ ಮಾಂಸ, ಮದ್ಯವನ್ನು ಕೊಟ್ಟು, ‘ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ’ ಎಂದೆಲ್ಲ ಆಶ್ವಾಸನೆ ಕೊಡುತ್ತಾರೆ. ಆದರೆ ಅವರೆಲ್ಲ ಈಗ ಎಲ್ಲಿದ್ದಾರೆ?

ಯಾವುದೇ ಸಾಲದ ಇಎಂಐಗಳನ್ನು ಲಾಕ್‌ಡೌನ್ ಸಮಯದಲ್ಲಿ ಕಟ್ಟುವುದು ಅನಿವಾರ್ಯವಲ್ಲ ಎಂದು ಸರ್ಕಾರ ಘೋಷಣೆ ಮಾಡಿಲ್ಲ. ಬಡವರಿಗೆ ಸರ್ಕಾರದಿಂದ ಬರುವ ಅಕ್ಕಿ ಇದ್ದರಷ್ಟೇ ಸಾಲದು. ದಿನನಿತ್ಯದ ವಸ್ತುಗಳು ಅಗತ್ಯವಾಗಿ ಬೇಕಾಗಿರುತ್ತವೆ. ಶಾಸಕರು, ಸಂಸದರು ಹಾಗೂ ಅವರ ಬೆಂಬಲಿಗರು ಇಂತಹ ಸಂಕಷ್ಟದ ಸಮಯದಲ್ಲಿ ಬಡಜನರ ಬೆಂಬಲಕ್ಕೆ ನಿಂತು, ವೋಟಿಗಾಗಿ ಅವರಿಗೆ ಕೊಡುತ್ತಿದ್ದ ನೋಟನ್ನು ಈಗ ಕೊಡುವಂತಾಗಲಿ. ದಿನನಿತ್ಯದ ಅಗತ್ಯ ವಸ್ತುಗಳು ಮತ್ತು ಹೆಲ್ತ್ ಕಿಟ್‌ಗಳನ್ನು ಕೊಟ್ಟು ಅವರಿಗೆ ಧೈರ್ಯ ತುಂಬುವಂತಹ ಕೆಲಸಕ್ಕೆ ಮುಂದಾಗಲಿ.

– ಶ್ರೀನಿವಾಸ್ ಚಕ್ರವರ್ತಿ, ಹೊಳಲು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.