ಸೋಮವಾರ, ನವೆಂಬರ್ 30, 2020
20 °C

ವಾಚಕರ ವಾಣಿ: ಮಕ್ಕಳಿಗಾಗಿ ಅತ್ಯುತ್ತಮ ಉಡುಗೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 6-18 ವರ್ಷದ ಮಕ್ಕಳಿಗಾಗಿ ‘ಓದುವ ಬೆಳಕು’ ಯೋಜನೆಯನ್ನು ಇದೇ 14ರಂದು ಜಾರಿಗೊಳಿಸಲಿರುವುದು ಶ್ಲಾಘನೀಯ. ಕೋವಿಡ್– 19 ಕಾರಣದಿಂದ ಜೀವನ ಸಾಗಿಸುವುದೇ ಕಷ್ಟವಾಗಿರುವ ಈ ಸಮಯದಲ್ಲಿ ಎಷ್ಟೋ ಪೋಷಕರಿಗೆ ಮೊಬೈಲ್, ಟ್ಯಾಬ್, ಲ್ಯಾಪ್‌ಟಾಪ್‌ಗಳನ್ನು ಮಕ್ಕಳಿಗಾಗಿ ಕೊಡಿಸಲಾಗುತ್ತಿಲ್ಲ. ಇದರಿಂದ ಅವರು ಕಲಿಕೆಯಿಂದ ವಿಮುಖರಾಗುತ್ತಿದ್ದಾರೆ. ಇಂತಹ ಸಂಕೀರ್ಣ ಸಮಯದಲ್ಲಿ ಎಲ್ಲ ಪಂಚಾಯಿತಿಗಳಲ್ಲಿ ಈ ಯೋಜನೆಯನ್ನು ಪ್ರಾರಂಭಿಸುತ್ತಿರುವುದು ಮಕ್ಕಳಲ್ಲಿ ಓದುವ ಅಭಿರುಚಿ, ಜ್ಞಾನ ವೃದ್ಧಿ, ಮಾನಸಿಕ ಬೆಳವಣಿಗೆಗೆ ನೆರವಾಗುತ್ತದೆ. ಈ ಯೋಜನೆಯು ಮಕ್ಕಳ ದಿನಾಚರಣೆಯಂದು ಸರ್ಕಾರ ಮಕ್ಕಳಿಗೆ ಕೊಡುವ ಅತ್ಯುತ್ತಮ ಉಡುಗೊರೆಯೇ ಸರಿ.

-ಬಿ.ಎಸ್.ಚೈತ್ರ, ಚಿತ್ರದುರ್ಗ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು