ಬುಧವಾರ, ಮಾರ್ಚ್ 3, 2021
29 °C

ಶಾಲೆ ತೆರೆಯಲಿ, ಗೊಂದಲ ದೂರವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳೆದ 10 ತಿಂಗಳಿನಿಂದ ಶಾಲಾ ವಿದ್ಯಾರ್ಥಿಗಳನ್ನು ಜ್ಞಾನದ ಕೊರತೆ ಕಾಡುತ್ತಿದೆ. ಶಾಲೆ ಮರೆತುಹೋಗಿದೆ. ಶಿಕ್ಷಕರ ನೇರ ಸಂಪರ್ಕ ತಪ್ಪಿದೆ. ಮಕ್ಕಳು ಅಲ್ಲಿ ಇಲ್ಲಿ ಸುತ್ತುತ್ತಾ ಕಾಲ ಕಳೆಯುವ ಬದಲು, ಶಾಲೆಗೆ ಬರಲು ಸರ್ಕಾರವು ಅಧಿಕೃತ ಆಹ್ವಾನ ಕೊಡಲಿ. ಹೆಚ್ಚಿನ ಮಕ್ಕಳಿಗೆ ಒತ್ತಾಸೆ ಇಲ್ಲದ್ದರಿಂದ ಓದಿನ ಕಡೆ ಗಮನವನ್ನೂ ಕೊಡಲಾಗದೆ, ಮನೆಯಲ್ಲಿ ಕಾಲ ಕಳೆಯಲೂ ಆಗದೆ ಮನಸ್ಸಿಗೆ ಬಂದಂತೆ ಇದ್ದಾರೆ. ಇದಕ್ಕಿಂತ ಶಾಲೆಯಲ್ಲಿ ಪಾಠ ಪ್ರವಚನಗಳನ್ನು ಕೇಳುವುದು ಒಳ್ಳೆಯದು. ಇದರಿಂದ ಅವರು ಮಾನಸಿಕವಾಗಿ ಸದೃಢರಾಗುತ್ತಾರೆ.

ಕೋವಿಡ್‌ ನಿಯಂತ್ರಣ ಕ್ರಮಗಳ ಕುರಿತಂತೆ ಶಿಕ್ಷಕರ ಮೇಲ್ವಿಚಾರಣೆ ಇರುವುದರಿಂದ ಮಕ್ಕಳು ಕೊರೊನಾ ಸೋಂಕಿನ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುವುದಿಲ್ಲ. ಜೊತೆಗೆ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚಾಗಿ ಇರುವುದರಿಂದ ಅನಗತ್ಯ ಆತಂಕ ಪಡುವ ಅಗತ್ಯವೂ ಇಲ್ಲ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಪೋಷಕರ ಚಿಂತೆ, ಮಕ್ಕಳ ಕಲ್ಯಾಣ, ಅವರ ಜ್ಞಾನ ವಿಕಾಸದ ಅಗತ್ಯ ಎಲ್ಲವನ್ನೂ ಪರಿಗಣಿಸಿ ಶಾಲೆಗಳನ್ನು ಆದಷ್ಟು ಬೇಗ ತೆರೆಯಬೇಕಾಗಿದೆ. ಈ ಬಗ್ಗೆ ಸರ್ಕಾರ ದೃಢ ನಿರ್ಧಾರ ಕೈಗೊಳ್ಳಲಿ.

ಎಚ್.ಎಸ್.ಟಿ.ಸ್ವಾಮಿ, ಚಿತ್ರದುರ್ಗ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು