ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಯ ವರ್ಗೀಕರಣ ಸಲ್ಲದು

Last Updated 3 ಜುಲೈ 2020, 19:30 IST
ಅಕ್ಷರ ಗಾತ್ರ

ಕರ್ನಾಟಕ ಭೂ ಸುಧಾರಣೆ ಕಾಯ್ದೆಯ ಉದ್ದೇಶಿತ ತಿದ್ದುಪಡಿ ವ್ಯಾಪ್ತಿಯಿಂದ ಅಚ್ಚುಕಟ್ಟು ಪ್ರದೇಶದ ನೀರಾವರಿ ಭೂಮಿಯನ್ನು ಹೊರಗಿಡುವುದಾಗಿ ಕಾನೂನು ಮತ್ತು ಸಣ್ಣ ನೀರಾವರಿ ಸಚಿವರು ತಿಳಿಸಿದ್ದಾರೆ (ಪ್ರ.ವಾ., ಜುಲೈ 3). ಆದರೆ ನಮ್ಮ ಜನರಿಗೆ ಎಣ್ಣೆಕಾಳು, ಬೇಳೆಕಾಳು, ಭತ್ತ ಹೊರತುಪಡಿಸಿ ಉಳಿದ ಆಹಾರಧಾನ್ಯಗಳನ್ನು ಪೂರೈಸುತ್ತಿರುವುದು ಖುಷ್ಕಿ ಭೂಮಿ. ರೈತರಿಗೆ ಬಹುಶಃ ಅದು ಲಾಭದಾಯಕವಲ್ಲ. ಆದರೆ ಈ ಭೂಮಿ ನಮ್ಮ ಜನರಿಗೆ ಇಂತಹ ಉತ್ಪನ್ನಗಳನ್ನು ಒದಗಿಸುತ್ತಾ ಉಪಯುಕ್ತವಾಗಿದೆ.

ಬೇಸಾಯದ ಭೂಮಿಯನ್ನು ನೀರಾವರಿ, ಖುಷ್ಕಿ ಎಂದು ವರ್ಗೀಕರಿಸುವುದು ಸರಿಯಲ್ಲ. ಹಿಂದೆ ಕಂದಾಯ ನಿರ್ಧರಿಸುವ ದೃಷ್ಟಿಯಿಂದ ಇಂತಹ ವರ್ಗೀಕರಣ ಮಾಡಲಾಗುತ್ತಿತ್ತು. ಉಪಯುಕ್ತತೆ ಮತ್ತು ಆಹಾರ ಭದ್ರತೆಯ ದೃಷ್ಟಿಯಿಂದ ಈ ವರ್ಗೀಕರಣ ತಪ್ಪು. ದ್ವಿದಳಧಾನ್ಯ ಬಳಕೆಯ ಪ್ರಮಾಣವೂ ಅಭಿವೃದ್ಧಿಯ ಒಂದು ಅಳತೆಗೋಲೇ ಆಗಿದೆ.

–‌ಕೆ.ವೆಂಕಟರಾಜು, ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT