ರಾಜ್ಯದ ಬಿಜೆಪಿ ನಾಯಕರು ಶಾಲಾ ಕಾಲೇಜುಗಳಿಗೆ ಬಣ್ಣ ಬಳಿಯುವ ‘ಬಣ್ಣ ದರ್ಪಣ’ ಎಂಬ ಹೊಸ ಪ್ರಯೋಗ ಆರಂಭಿಸಿದ್ದು ಸಂತೋಷದ ವಿಷಯ. ಆದರೆ ಶಾಲೆಯ ಹೊರಗೆ ಬಣ್ಣ ಬಳಿಯುವ ಮೊದಲು, ಶಾಲೆಯಲ್ಲಿ ಶೌಚಾಲಯ ಸರಿ ಇದೆಯೋ ಇಲ್ಲವೋ, ಶಾಲೆಯ ಶೈಕ್ಷಣಿಕ ಪ್ರಗತಿ ಹೇಗಿದೆ, ಶಿಕ್ಷಕರಿಗೆ ಅಲ್ಲಿ ಏನು ಸೌಕರ್ಯ ಬೇಕಾಗಿದೆ, ಕ್ರೀಡೆಯಲ್ಲಿ ಶಾಲೆಯ ಸಾಧನೆ ಏನು, ಕಂಪ್ಯೂಟರ್ ಲ್ಯಾಬ್, ಸೈನ್ಸ್ ಲ್ಯಾಬ್ ಎಷ್ಟರಮಟ್ಟಿಗೆ ಸರಿ ಇವೆ ಎಂಬುದನ್ನೆಲ್ಲ ಶಾಸಕರು, ಸಂಸದರು ಮೊದಲು ತಿಳಿದುಕೊಳ್ಳಲಿ. ಅಲ್ಲಿನ ಸಮಸ್ಯೆ ಆಲಿಸಲಿ. ಶಾಲೆ ಅಂದವಾಗಿ ಕಾಣಬೇಕಿರುವುದು ಹೊರಗಿನಿಂದಲ್ಲ, ಆಂತರಿಕವಾಗಿ.