ಭಾನುವಾರ, ಜನವರಿ 19, 2020
23 °C

ಯಂತ್ರಜ್ಞಾನದ ಯುಗದಲ್ಲಿ ಹೆಜ್ಜೆ ಹಿಂದಕ್ಕೆ.‌..?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ‘ಪೆಡಲ್ ಪೊಲೀಸ್’ ಗಸ್ತು ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಪ್ರತಿ ಪೊಲೀಸ್ ಠಾಣೆಗೂ ಐದು ಸೈಕಲ್‌ಗಳನ್ನು ವಿತರಿಸಲಾಗುತ್ತಿದೆ. ‘ಇಕ್ಕಟ್ಟಾದ ಸ್ಥಳಗಳಲ್ಲಿ ಮೋಟಾರು ವಾಹನ ಹಾಗೂ ಬೈಕ್‌ಗಳಲ್ಲಿ ಗಸ್ತು ತಿರುಗುವುದು ಕಷ್ಟ. ಅಂಥ ಸ್ಥಳಗಳಲ್ಲಿ ಗಸ್ತು ತಿರುಗಲು ಈ ವ್ಯವಸ್ಥೆ’ ಎಂದು ಕಮಿಷನರ್ ಭಾಸ್ಕರ್‌ ರಾವ್ ಹೇಳಿದ್ದಾರೆ (ಪ್ರ.ವಾ., ಡಿ. 16).

ಇತ್ತೀಚಿನ ವರ್ಷಗಳಲ್ಲಿ ಸರಗಳ್ಳರು, ಪೋಕರಿಗಳು ಹಾಗೂ ಸಮಾಜಘಾತುಕರು ಅತಿವೇಗದ ಬೈಕುಗಳಲ್ಲಿ ದುಷ್ಕೃತ್ಯ ಎಸಗಿ ಶರವೇಗದಲ್ಲಿ ಪರಾರಿಯಾಗುತ್ತಿರುವುದು ಕಣ್ಣ ಮುಂದೆಯೇ ಇದೆ. ಇಂತಹವರನ್ನು ನಿಧಾನಗತಿಯ ಸೈಕಲ್‌ ಮೇಲೇರಿ ಹಿಂಬಾಲಿಸಿ, ಹಿಡಿದು ಹೆಡೆಮುರಿ ಕಟ್ಟಲು ಸಾಧ್ಯವೇ? ಈಗ ಲಭ್ಯವಿರುವ ಯಂತ್ರಜ್ಞಾನವನ್ನು ಬಳಸಿಕೊಂಡು ಇಲಾಖೆ ಯಶಸ್ಸು ಸಾಧಿಸುತ್ತಿರುವ ಈ ದಿನಗಳಲ್ಲಿ, ಈ ವ್ಯವಸ್ಥೆಯು ಹಿಂದಕ್ಕೆ ಹೆಜ್ಜೆ ಹಾಕಿದಂತೆ ಅನ್ನಿಸುತ್ತದೆ.

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

 

 

ಪ್ರತಿಕ್ರಿಯಿಸಿ (+)