ಭಾನುವಾರ, ಆಗಸ್ಟ್ 14, 2022
22 °C

ನಿರುದ್ಯೋಗದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದ ಯುವಜನರ ಬೆಂಬಲದೊಂದಿಗೆ 2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿ ಪಟ್ಟಕ್ಕೇರಿದಾಗ, ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು. ಆ ಮಾತು ಒತ್ತಟ್ಟಿಗಿರಲಿ, ಸದ್ಯ ಇದ್ದ ಉದ್ಯೋಗಗಳಲ್ಲೇ ಈಗ ಲಕ್ಷಾಂತರ ಉದ್ಯೋಗಗಳು ನಷ್ಟವಾಗಿವೆ. ಪ್ರಧಾನಿಯತ್ತ ಆಸೆ ಕಂಗಳಿಂದ ನೋಡುತ್ತಿದ್ದ ಯುವಜನ, ಕೆಲಸ ಕೊಡಿ ಎಂದು ಟ್ವೀಟ್‌ ಮಾಡಿ ದುಂಬಾಲು ಬೀಳುತ್ತಿರುವ ಸ್ಥಿತಿ ಕರುಣಾಜನಕವಾಗಿದೆ. ಆದರೆ ಪ್ರಧಾನಿ ಈ ಕುರಿತು ಯಾವುದೇ ಮಾತನಾಡದೆ ಮೌನ ವಹಿಸಿರುವುದು ಸರಿಯಲ್ಲ.

–ಪ್ರೊ. ಶಿವರಾಮಯ್ಯ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು