ಭಾನುವಾರ, ಮೇ 9, 2021
22 °C

ವಾಚಕರ ವಾಣಿ | ರಾಜಕೀಯ ಸೇರ್ಪಡೆ: ಯುವಕರಿಗೆ ಸ್ಫೂರ್ತಿಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದ ರಾಜಕೀಯ ಶುದ್ಧೀಕರಣಕ್ಕೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಶ್ರಮಿಸಲು ಪ್ರಜ್ಞಾವಂತ ನಾಗರಿಕರು, ಅದರಲ್ಲೂ ನಾಗರಿಕ ಸೇವಾ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ದಕ್ಷ ಅಧಿಕಾರಿಗಳು ಸಕ್ರಿಯ ರಾಜಕೀಯಕ್ಕೆ ಬರುತ್ತಿರುವುದು ಕುತೂಹಲಕರ ಬೆಳವಣಿಗೆ. ಈ ಭ್ರಷ್ಟ ವ್ಯವಸ್ಥೆಯಲ್ಲಿ ಒಬ್ಬ ಅಧಿಕಾರಿಯಾಗಿ ಹೆಚ್ಚಿನ ಬದಲಾವಣೆ ತರಲು ಸಾಧ್ಯವಿಲ್ಲ, ಶಾಸನಸಭೆಗಳ ಮೂಲಕ ಅಂತಹ ಬದಲಾವಣೆ ತರಬಹುದು ಎಂದು ಭಾವಿಸಿ ರಾಜಕೀಯಕ್ಕೆ ಯಾರಾದರೂ ಬರುವುದಾದರೆ ಅಂಥವರನ್ನು ಸ್ವಾಗತಿಸೋಣ.

ಜಡ್ಡುಗಟ್ಟಿದ ಈ ವ್ಯವಸ್ಥೆಯಲ್ಲಿ ಬದಲಾವಣೆ ತರಬಯಸಿ, ತಮ್ಮ ಐಪಿಎಸ್‌ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಪದಾರ್ಪಣೆ ಮಾಡಿರುವ ಕೆ.ಅಣ್ಣಾಮಲೈ ಅವರ ನಡೆಯು ಪ್ರಜ್ಞಾವಂತ ಯುವಕರಿಗೆ ಸ್ಫೂರ್ತಿಯಾಗಲಿ. 

-ಬಾಬು ಶಿರಮೋಜಿ, ಬೆಳಗಾವಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.