ರೆಸಾರ್ಟ್‌ ಸಂಸ್ಕೃತಿ​ ಶಾಸಕರು ನಮಗೆ ಬೇಕೇ?: ಹಿರಿಯರು ಹೊಣೆಗಾರಿಕೆ ತೋರಲಿ

7

ರೆಸಾರ್ಟ್‌ ಸಂಸ್ಕೃತಿ​ ಶಾಸಕರು ನಮಗೆ ಬೇಕೇ?: ಹಿರಿಯರು ಹೊಣೆಗಾರಿಕೆ ತೋರಲಿ

Published:
Updated:

ರಾಜ್ಯದಲ್ಲಿ ಕೈ, ಕಮಲ, ತೆನೆಗಳ ಜಗ್ಗಾಟದಲ್ಲಿ ಶಾಸಕರ ನೈತಿಕತೆ ಪ್ರಶ್ನಾರ್ಹವಾಗಿದೆ. ವಿವಿಧ ಪಕ್ಷಗಳಲ್ಲಿ ಹಲವಾರು ಹಿರಿಯ ಶಾಸಕರಿದ್ದರೂ ಅವರು ಯಾರೂ ತಮ್ಮ ಪಕ್ಷಗಳ ತಪ್ಪು ಒಪ್ಪುಗಳನ್ನು ಪ್ರಶ್ನಿಸದೆ, ನಾಯಕರ ಮಾತಿಗೆ ಮೂಕ ಪ್ರಾಣಿಗಳಂತೆ ತಲೆ ಅಲ್ಲಾಡಿಸುತ್ತಿದ್ದಾರೆ. ಇಂತಹ ಪ್ರವೃತ್ತಿ, ಮತದಾರರಿಗೆ ಮಾಡುವ ದೊಡ್ಡ ಮೋಸ.

ರಾಜ್ಯದ ಜನ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಶಾಸಕರ ಐಷಾರಾಮಿ ಜೀವನಕ್ಕೇನೂ ಕೊರತೆಯಾಗಿಲ್ಲ. ರಾಜಕೀಯ ಅಸ್ಥಿರತೆಯ ನೆಪ ಮಾಡಿಕೊಂಡು ಮೇಲಿಂದ ಮೇಲೆ ದುಬಾರಿ ವೆಚ್ಚದ ರೆಸಾರ್ಟ್‌ಗಳಿಗೆ ತೆರಳಿ, ಸಾರ್ವಜನಿಕರ ತೆರಿಗೆ ಹಣಕ್ಕೆ ಕನ್ನ ಹಾಕುವ ಇಂಥ ಶಾಸಕರು ನಮಗೆ ಬೇಕೇ? ಆಯಾ ಪಕ್ಷದ ಹಿರಿಯರು, ಶಾಸಕರನ್ನು ರೆಸಾರ್ಟ್‌ ಸಂಸ್ಕೃತಿಯಿಂದ ದೂರ ಇಡುವ ಸಾಮಾಜಿಕ ಜವಾಬ್ದಾರಿ ತೋರಲಿ. 

-ವಿ.ಜಿ. ಇನಾಮದಾರ, ಸಾರವಾಡ, ವಿಜಯಪುರ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !