ಶನಿವಾರ, ಜುಲೈ 24, 2021
28 °C

ವಿದ್ಯಾರ್ಥಿಗಳಿಗೆ ಜನನಾಯಕರು ಮಾದರಿ!

ಶಂಕರಗೌಡ ಬಿರಾದಾರ. ಮುಳಸಾವಳಗಿ Updated:

ಅಕ್ಷರ ಗಾತ್ರ : | |

ಮಕ್ಕಳಿಗೆ ತಂದೆ– ತಾಯಿ ಶಿಕ್ಷಣ ಕೊಡಿಸುವುದು ಅವರ ಭವಿಷ್ಯ ಬೆಳಗಲಿ ಎಂಬ ಕಾರಣಕ್ಕೆ. ತಮ್ಮ ಮಕ್ಕಳು ಈ ಜಗತ್ತಿಗೆ ಏನಾದರೂ ಕೊಡುಗೆ ನೀಡಲಿ ಎಂಬ ಮಹದಾಸೆ ಎಷ್ಟೋ ಪೋಷಕರಿಗೆ ಇರುತ್ತದೆ. ಮಕ್ಕಳ ಜೀವನ ರೂಪಿಸಲು ಪೋಷಕರು ತಮ್ಮ ಜೀವನವನ್ನೇ ಮುಡಿಪಾಗಿ ಇಟ್ಟಿರುತ್ತಾರೆ. ಆದರೆ ಇದನ್ನೆಲ್ಲಾ ಮನಗಾಣದೆ, ಉತ್ತಮ ಫಲಿತಾಂಶ ಬಾರದ ಕಾರಣಕ್ಕೆ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದು, ತಂದೆ ತಾಯಿಗೆ ಅವರು ಬಗೆಯುವ ಮಹಾದ್ರೋಹವೇ ಸರಿ.

ಪರೀಕ್ಷೆಯಲ್ಲಿ ಫೇಲಾದರೆ ಮತ್ತೆ  ಬರೆದು ಪಾಸಾಗಬಹುದು. ಆದರೆ ಜೀವನವೇ ಇಲ್ಲವೆಂದರೆ ಯಾವ ಸಾಧನೆಯನ್ನೂ ಮಾಡುವುದಕ್ಕೆ ಆಗುವುದಿಲ್ಲ. ವಿದ್ಯಾರ್ಥಿಗಳು ಈ ವಿಷಯದಲ್ಲಿ ನಮ್ಮ ಜನಪ್ರತಿನಿಧಿಗಳನ್ನು ಮಾದರಿಯಾಗಿ ತೆಗೆದುಕೊಳ್ಳಬಹುದು. ಚುನಾವಣೆಯಲ್ಲಿ ಪರಾಭವಗೊಂಡ ನಮ್ಮ ಯಾವುದೇ ಜನನಾಯಕ ಎಂದಾದರೂ ಆತ್ಮಹತ್ಯೆಗೆ ಶರಣಾಗಿದ್ದಾರೆಯೇ? ಅಂತಹ ಇತಿಹಾಸವೇ ಇಲ್ಲ. ಪರೀಕ್ಷೆಯಲ್ಲಿ ಫೇಲಾದ ಮಾತ್ರಕ್ಕೆ ಕೆಲವು ವಿದ್ಯಾರ್ಥಿಗಳು ಸಾಯಲು ಮುಂದಾಗುವುದೇಕೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು