ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತಪರ ಸಕಾರಾತ್ಮಕ ನಿಲುವು

Last Updated 5 ಜುಲೈ 2021, 19:31 IST
ಅಕ್ಷರ ಗಾತ್ರ

ರೈತರು ನೇರ ಮಾರಾಟಕ್ಕೆ ‘ಸ್ಮಾರ್ಟ್’ ಉಪಾಯಗಳನ್ನು ಕಂಡುಕೊಳ್ಳಬೇಕು ಎಂಬ ಪ.ರಾಮಕೃಷ್ಣ ಶಾಸ್ತ್ರಿ ಅವರ ರೈತಪರ ಸಕಾರಾತ್ಮಕ ನಿಲುವುಗಳು (ಸಂಗತ, ಜುಲೈ 4) ಸರಿಯಾಗಿವೆ. ‘ಅನ್ನದಾತೊ ಸುಖೀಭವ’ ಎಂಬ ಮಾತು ಇಂದು ರೈತರ ಪಾಲಿಗೆ ಸಖ್ಯವಾಗಿ ಉಳಿದಿಲ್ಲ. ಸರ್ಕಾರದ ಪ್ರಮುಖ ಕೃಷಿಪರ ಯೋಜನೆಗಳು ಕೇವಲ ಕಾಗದದ ರೂಪದಲ್ಲಿದ್ದು ಕಾರ್ಯರೂಪಕ್ಕೆ ಬರದೆ ಇರುವುದೂ ಇದಕ್ಕೆ ಕಾರಣವಾಗಿರಬಹುದು.

ಇಸ್ರೇಲ್ ಮಾದರಿಯ ತಂತ್ರಜ್ಞಾನದ ಕುರಿತು ಹಳ್ಳಿಗರಿಗೆ ಮನವರಿಕೆ ಆಗುವಂತಹ ಯೋಜನೆಗಳನ್ನು ಸರ್ಕಾರ ರೂಪಿಸ ಬೇಕು. ಅನಕ್ಷರಸ್ಥ ರೈತರಿಗೆ ಮಾರುಕಟ್ಟೆಯ ವ್ಯವಹಾರಗಳ ಕುರಿತು ಅರಿವು ಮೂಡಿಸುವ ಕಾರ್ಯಾಗಾರ ನಡೆಸಿ, ಬೆಳೆ ಸಮೀಕ್ಷೆ, ಸಾವಯವ ಕೃಷಿ ಮತ್ತು ತಂತ್ರಜ್ಞಾನ ಬಳಸಿ ಬೆಳೆದ ಬೆಳೆಯನ್ನು ಯಾವ ರೀತಿ ಮಾರುಕಟ್ಟೆಗೆ ತರಬೇಕೆಂಬ ವಿಷಯಗಳನ್ನು ತಿಳಿಸಬೇಕು. ಯಾಕೆಂದರೆ, ‘ಒಕ್ಕಲಿಗ ಒಕ್ಕಿದರೆ ನಕ್ಕು ನಲಿಯುವುದು ಜಗವೆಲ್ಲ, ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ’ ಎಂಬ ಮಾತಂತೂ ಸತ್ಯ.

–ಕೆಂಪಯ್ಯಾ ಕರಿಕಟ್ಟಿ, ಜಾಗನೂರ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT