ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಬಾಕಿ: ಕಾರಣ ಹತ್ತಾರು

Last Updated 29 ಜೂನ್ 2022, 19:15 IST
ಅಕ್ಷರ ಗಾತ್ರ

ರಾಜ್ಯದ ಐದು ‘ಎಸ್ಕಾಂ’ಗಳ ಮೇಲೆ 29 ಸಾವಿರ ಕೋಟಿ ರೂಪಾಯಿಯ ಸಾಲದ ಹೊರೆ ಇದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ (ಪ್ರ.ವಾ., ಜೂನ್‌ 29). ಇದಕ್ಕೆ ವಿವಿಧ ಸಬ್ಸಿಡಿಯಡಿ ಉಚಿತ ವಿದ್ಯುತ್ ಪೂರೈಕೆ, ಮೀಟರ್ ಅಳವಡಿಸದೇ ಇರುವುದು, ಬಿಲ್ ನೀಡದೇ ಇರುವುದು, ಅದಕ್ಷತೆ ಮುಂತಾದ ಕಾರಣಗಳಿದ್ದು, ಇವುಗಳ ಪಾಲು ಶೇ 45 ಅಂತೆ. ಮುನಿಸಿಪಾಲಿಟಿ, ಕಾರ್ಪೊರೇಷನ್, ಗ್ರಾಮ ಪಂಚಾಯಿತಿ ಮತ್ತು ಕೆಲವು ಖಾಸಗಿ ಸಂಸ್ಥೆಗಳಿಂದ ಸರಿಯಾಗಿ ಬಿಲ್ ವಸೂಲಿ ಮಾಡದಿರುವುದು ಸಹ ಕಾರಣವಾಗಿರಬಹುದು.

ಸರ್ಕಾರಿ ಸಂಸ್ಥೆಗಳಾದ ಕೆಪಿಸಿಎಲ್, ಆರ್‌ಪಿಸಿಎಲ್‌ನಿಂದ ಖರೀದಿಸಿದ ವಿದ್ಯುತ್ ಬಾಕಿ ಹನ್ನೊಂದು ಸಾವಿರ ಕೋಟಿ ಅಂತ ಹೇಳಿದ್ದಾರೆ. ಇದರ ಅರ್ಥ ಖಾಸಗಿ ಸಂಸ್ಥೆಗಳಿಂದ ಖರೀದಿಸಿದ ವಿದ್ಯುತ್‌ಗೆ ಬಿಲ್ಲು ಉಳಿಸಿಕೊಳ್ಳದೆ ಪಾವತಿಸಿದ್ದಾರೆ ಅಂತ ಅರ್ಥ. ಕೆಪಿಸಿಎಲ್‌ನಂತಹ ಸಂಸ್ಥೆಗಳಿಂದ ವಿದ್ಯುತ್ ಖರೀದಿಸಿ ಹಣ ಕೊಡದೇ ಉಳಿಸಿಕೊಂಡಿರುವುದು ಎಷ್ಟು ಸರಿ? ಆ ಸಂಸ್ಥೆಗಳು ಬೆಳೆಯುವುದಾದರೂ ಹೇಗೆ?

-ದೇವರಾಜಾಚಾರ್,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT