ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ, 24–5–1969

Last Updated 23 ಮೇ 2019, 18:30 IST
ಅಕ್ಷರ ಗಾತ್ರ

‌ಬಿನ್ನಿಮಿಲ್ಸ್ ಲಾಕೌಟ್

ಬೆಂಗಳೂರು, ಮೇ 23– ಮಿಲ್ಸ್‌ ಕೆಲಸವನ್ನು ನಡೆಸಲು ಅಸಾಧ್ಯವಾದ ಪರಿಸ್ಥಿತಿ ಉಂಟಾಯಿತೆಂಬ ಕಾರಣದ ಮೇಲೆ ಶುಕ್ರವಾರ ರಾತ್ರಿ 12.30ರಿಂದ ಬಿನ್ನಿಮಿಲ್ಸ್ ಲಾಕೌಟ್‌ನ್ನು ಘೋಷಿಸಿತು.

ನಗರದ ಪೊಲೀಸ್ ಕಮೀಷನರ್ ಅವರು ಶುಕ್ರವಾರ ಮಧ್ಯರಾತ್ರಿಯಿಂದ ಬಿನ್ನಿಮಿಲ್ಸ್‌ನ ಅರ್ಧ ಮೈಲಿ ಫಾಸಲೆಯೊಳಗೆ ಸಭೆ ಹಾಗೂ ಮೆರವಣಿಗೆ ನಡೆಯುವುದನ್ನು ಪೊಲೀಸ್ ಶಾಸನದ 35ನೇ ವಿಧಿಯ ರೀತ್ಯ ನಿಷೇಧಿಸಿದ್ದಾರೆ.

ಲಾಕೌಟ್‌ ಘೋಷಣೆಯಾದ ನಂತರ ಭೇಟಿ ಮಾಡಿದ ವರದಿಗಾರರಿಗೆ ಪರಿಸ್ಥಿತಿಯನ್ನು ವಿವರಿಸಿದ ಮಿಲ್ಸ್‌ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಥಾಮಸ್ ಅವರು ಲಾಕೌಟ್‌ ಮಾಡದೆ ಬೇರೆ ಮಾರ್ಗವೇ ಇರಲಿಲ್ಲವೆಂದು ಹೇಳಿ ನಾಳೆ ಅಸಿಸ್ಟೆಂಟ್ ಲೇಬರ್ ಕಮೀಷನರ್ ಮುಂದೆ ಸಂಧಾನ ನಡೆಯಲಿದೆಯೆಂದೂ ತಿಳಿಸಿದರು.

ಚಂದ್ರನನ್ನು ಸಮೀಪಿಸಿ ಮಾತೃನೌಕೆಗೆ ಲೂನಾರ್ ಮಾಡ್ಯೂಲ್

ಹೂಸ್ಟನ್ (ಟೆಕ್ಸಾಸ್), ಮೇ 23– ಮಾನವ ಹಿಂದೆಂದೂ ಹೋಗದಷ್ಟು ಚಂದ್ರನ ಸಮೀಪಕ್ಕೆ ಹೋಗಿ, ಮಾನವ ಚಂದ್ರನಲ್ಲಿ ಇಳಿಯುವ ತಾಣವನ್ನು ಗುರುತಿಸಿದ ನಂತರ ಗಗನಯಾತ್ರಿ ಟಾಮ್ ಸ್ಟಾಫರ್ಡ್, ಯುಜೀನ್‌ ಸೆರ್ನನ್ ಇಂದು ಮತ್ತೆ ಅಪೊಲೊ– 10 ನೌಕೆಗೆ ಸುರಕ್ಷಿತವಾಗಿ ವಾಪಸಾದರು.

‘ಸ್ನೂಪಿ’ ಎಂಬ ಅಡ್ಡ ಹೆಸರಿನ ಅತಿ ನಾಜೂಕಾದ ಲೂನಾರ್ ಮಾಡ್ಯೂಲ್‌ನಲ್ಲಿ ಸ್ಟಾಫರ್ಡ್ ಮತ್ತು ಸೆರ್ನನ್ ಅತ್ಯಂತ ಸಾಹಸಮಯ ಯಾತ್ರೆ ಕೈಗೊಂಡು, ಅಲ್ಲಲ್ಲೇ ಹೊಂಡಬಿದ್ದ ಚಂದ್ರನ ಮೇಲ್ಮೈಗೆ 8.2 ನೌಕಾ ಮೈಲಿಗಳ (16 ಕಿಲೋ ಮೀಟರ್) ದೂರದವರೆಗೂ ಹೋಗಿ ಜುಲೈನಲ್ಲಿ ಅಮೆರಿಕದ ಗಗನಯಾತ್ರಿ ಚಂದ್ರಗ್ರಹದಲ್ಲಿ ಇಳಿಯುವ ತಾಣವನ್ನು ಗುರುತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT