ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ದೇಶಿ ಭಾಷೆ: ಬದ್ಧತೆ ತೋರಲು ಸಕಾಲ

Last Updated 10 ಆಗಸ್ಟ್ 2022, 22:30 IST
ಅಕ್ಷರ ಗಾತ್ರ

ವೆಂಕಯ್ಯ ನಾಯ್ಡು ಅವರು ಉಪರಾಷ್ಟ್ರಪತಿ ಅವಧಿ ಮುಗಿದ ಸಂದರ್ಭದಲ್ಲಿ ವಿದಾಯ ಭಾಷಣ ಮಾಡುವಾಗ, ಮಾತೃಭಾಷೆ ಅಥವಾ ರಾಜ್ಯ ಭಾಷೆಗಳ ಬಳಕೆಯ ಮಹತ್ವ ಕುರಿತು ಒತ್ತಿ ಹೇಳಿದರು. ಈ ಹಿಂದೆ ಕೂಡ ಅವರು ಹಲವಾರು ಸಂದರ್ಭಗಳಲ್ಲಿ ಈ ಬಗ್ಗೆ ಮಾತನಾಡಿದ್ದುಂಟು. ದೇಶಿ ಭಾಷೆಗಳ ಕುರಿತು ಅವರ ಕಳಕಳಿ ಪ್ರಶಂಸನೀಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಬೇಕಾಗಿದೆ.

ದೇಶಿ ಭಾಷೆಗಳಿಗೆ ಸಾಂವಿಧಾನಿಕ ಬಲ ನೀಡಲು ಅವು ಮೊದಲು ಮುಂದಾಗಬೇಕು. ಅದರಲ್ಲೂ ಪ್ರಾಥಮಿಕ ಹಂತದಲ್ಲಿ ಆಯಾ ರಾಜ್ಯಗಳ ಭಾಷೆಯು ಕಲಿಕಾ ಮಾಧ್ಯಮವಾಗದೆ, ದೇಶಿ ಭಾಷೆಗಳಿಗೆ ಬಲ ಬರುವುದಿಲ್ಲ. ಈ ಕುರಿತು ಇರುವ ಎಲ್ಲ ದ್ವಂದ್ವಗಳು ಮತ್ತು ಗೊಂದಲಗಳನ್ನು ಹೋಗಲಾಡಿಸಲು ಸರ್ಕಾರಗಳು ತ್ವರಿತ ಕ್ರಮ ತೆಗೆದುಕೊಳ್ಳುವ ಮೂಲಕ ದೇಶಿ ಭಾಷೆಗಳ ಕುರಿತು ತಮಗಿರುವ ಬದ್ಧತೆಯನ್ನು ತೋರಿಸಲು ಇದು ಸಕಾಲ.

ವೆಂಕಟೇಶ ಮಾಚಕನೂರ,ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT