ದಲೈ ಲಾಮಾ ಆಯ್ಕೆ: ವಿವಾದ ಬೇಡ

ಟಿಬೆಟ್ನ ಧರ್ಮಗುರು ದಲೈ ಲಾಮಾ ಅವರು ‘ನನಗೆ 90 ವರ್ಷ ತುಂಬಿತು, ಇನ್ನು ನನ್ನ ಸ್ಥಾನಕ್ಕೆ ಬೇರೆ ಧರ್ಮಗುರುವನ್ನು ಆಯ್ಕೆ ಮಾಡಿಕೊಳ್ಳಿ’ ಎಂದು ಮನವಿ ಮಾಡಿಕೊಂಡಿದ್ದಾರೆ (ಪ್ರ.ವಾ., ಜುಲೈ 3). ಆದರೆ, ಚೀನಾ ತನ್ನ ಅನುಮತಿ ಇಲ್ಲದೆ ಮುಂದಿನ ದಲೈ ಲಾಮಾ ಅವರ ಆಯ್ಕೆ ಕೂಡದು ಎಂದು ಅಸಮ್ಮತಿ ವ್ಯಕ್ತಪಡಿಸಿದೆ. ಮುಂದಿನ ದಲೈ ಲಾಮಾ ಅವರ ಆಯ್ಕೆ ವಿಚಾರದಲ್ಲಿ ವಿವಾದಕ್ಕೆ ಆಸ್ಪದ ಕಲ್ಪಿಸದೆ, ಜಾಗತಿಕ ಧರ್ಮಶಾಲೆಗಳ ಪ್ರಮುಖರೆಲ್ಲಾ ಒಂದೆಡೆ ಸಭೆ ಸೇರಿ, ಸೌಹಾರ್ದಯುತವಾಗಿ ಮಹಾ ಧರ್ಮಗುರುವಿನ ಆಯ್ಕೆ ಮಾಡುವುದು ನಾವು ಬುದ್ಧನಿಗೆ ತೋರುವ ಗೌರವವಾಗಿದೆ.

⇒ಪ್ರೊ. ಶಿವರಾಮಯ್ಯ, ಬೆಂಗಳೂರು

ಬೈಕ್ ಟ್ಯಾಕ್ಸಿಗೆ ಅನುಮತಿ ಸ್ವಾಗತಾರ್ಹ

ರಾಜ್ಯದಲ್ಲಿ ನಿಷೇಧ ಹೇರಲಾಗಿದ್ದ ಬೈಕ್ ಟ್ಯಾಕ್ಸಿ ಸೇವೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದು ಸ್ವಾಗತಾರ್ಹ. ಬೈಕ್ ಟ್ಯಾಕ್ಸಿಗಳು ಕೈಗೆಟುವ ದರದಲ್ಲಿ ಸೇವೆ ಒದಗಿಸುತ್ತಿದ್ದವು. ಮಧ್ಯಮ ವರ್ಗದವರು, ವಿದ್ಯಾರ್ಥಿಗಳು, ಮಹಿಳೆಯರು ಇವುಗಳನ್ನು ಬಳಸಿಕೊಳ್ಳುತ್ತಿದ್ದರು. ನಿರುದ್ಯೋಗಿ ಯುವಜನರು, ಕೆಲವು ಕಾಲೇಜು ವಿದ್ಯಾರ್ಥಿಗಳೂ ಬೈಕ್ ಟ್ಯಾಕ್ಸಿ ಓಡಿಸುವುದನ್ನು ಅರೆಕಾಲಿಕ ವೃತ್ತಿಯನ್ನಾಗಿ ಮಾಡಿಕೊಂಡಿದ್ದರು.

ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು 1988ರ ಮೋಟಾರು ವಾಹನ ಕಾಯ್ದೆ ಅನ್ವಯ ಅಗ್ರಿಗೇಟರ್ ಮಾರ್ಗಸೂಚಿ ಬಿಡುಗಡೆ ಮಾಡಿ, ಖಾಸಗಿ ಬೈಕ್ ಟ್ಯಾಕ್ಸಿಗಳ ಸೇವೆಯನ್ನು ಪ್ರಯಾಣಿಕರ ಸಂಚಾರಕ್ಕೆ ಬಳಸಲು ರಾಜ್ಯ ಸರ್ಕಾರ ಅನುಮತಿ ಕೊಡಬಹುದು ಎಂದು ಹೇಳಿದೆ. ಹಾಗಾಗಿ, ರಾಜ್ಯ ಸರ್ಕಾರ ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ಮತ್ತು ಸುರಕ್ಷಿತ ಸೇವೆ ಒದಗಿಸುವ ನಿಟ್ಟಿನಲ್ಲಿ ನಿಯಮ ರೂಪಿಸಿ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಅನುವು ಮಾಡಿಕೊಡಬೇಕಾಗಿದೆ.

⇒ದರ್ಶನ್ ಚಂದ್ರ ಎಂ.ಪಿ., ಮುಕ್ಕಡಹಳ್ಳಿ

‘ನೈಸ್’ ಟೋಲ್ ದರ ಇನ್ನಷ್ಟು ಹೆಚ್ಚಲಿ

ಜುಲೈ 1ರಿಂದ ಅನ್ವಯವಾಗುವಂತೆ ‘ನೈಸ್’ ಸಂಸ್ಥೆಯು ಟೋಲ್ ದರವನ್ನು ಶೇ 10ರಷ್ಟು ಹೆಚ್ಚಿಸಿದೆ. ಆದರೆ, ಇದು ಅತ್ಯಲ್ಪ ಏರಿಕೆಯಾಗಿದ್ದು ಯಾವುದಕ್ಕೂ ಸಾಕಾಗುವುದಿಲ್ಲ. ಇದನ್ನು ಕನಿಷ್ಠ ಶೇ 20ರಿಂದ 30ರಷ್ಟು ಏರಿಸಿದರೆ ಒಳಿತು. ಕಾರಣವಿಷ್ಟೇ. ದೇಶದಲ್ಲಿಯೇ ನೈಸ್ ರಸ್ತೆಯ ಬಳಕೆದಾರರ ಶುಲ್ಕ ಅತ್ಯಂತ ದುಬಾರಿ ಎಂಬುದು ಸ್ಪಷ್ಟ. ಈಗ ಈ ದರವನ್ನು ಮತ್ತಷ್ಟು ಹೆಚ್ಚಿಸಿದಲ್ಲಿ ‘ಅತ್ಯಂತ ದುಬಾರಿ ರಸ್ತೆ’ ಎಂಬ ಹೆಗ್ಗಳಿಕೆಯನ್ನು ನೈಸ್ ಸಂಸ್ಥೆಯೇ ಉಳಿಸಿಕೊಂಡಂತಾಗುತ್ತದೆ. ಇದು ‘ಬ್ರ್ಯಾಂಡ್ ಬೆಂಗಳೂರಿಗೆ’ ಹೆಮ್ಮೆಯ ವಿಷಯವೇ ಸರಿ.

ಟೋಲ್ ದರ ಏರಿಕೆಗೆ ಬಡವರು ಹಾಗೂ ಮಧ್ಯಮ ವರ್ಗದವರು ಪ್ರತಿಭಟಿಸಿದರೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಏಕೆಂದರೆ, ಇದೇ ರಸ್ತೆಯನ್ನು ಬಳಸಬೇಕೆಂದು ಸರ್ಕಾರವೇನೂ ಕಡ್ಡಾಯ ಮಾಡಿಲ್ಲ. ನೈಸ್ ರಸ್ತೆಯಲ್ಲಿ ಕೇವಲ ಹೈಎಂಡ್ ಎಸ್ಯುವಿಗಳು ಓಡಾಡಿದರೆ, ಜಗತ್ತಿಗೆ ಬೆಂಗಳೂರಿನ ಸೌಕರ್ಯಗಳನ್ನು ತೋರಿಸಿದಂತಾಗುತ್ತದೆ. ಆಗ ಬೆಂಗಳೂರಿಗೆ ಜಾಗತಿಕ ಬಂಡವಾಳ ಹರಿದು ಬಂದು ನಿರುದ್ಯೋಗ ನಿವಾರಣೆಯಾಗುತ್ತದೆ. ಈ ರಸ್ತೆಯಲ್ಲಿ ಓಡಾಡಬೇಕೆಂಬ ಹಂಬಲದಿಂದ ಜನರು ವಾರಕ್ಕೆ 70 ಗಂಟೆಗೂ ಹೆಚ್ಚು ದುಡಿದು, ಹಣ ಗಳಿಸಿ, ಶ್ರೀಮಂತರಾಗುತ್ತಾರೆ. ಈ ಎಲ್ಲ ಕಾರಣಗಳಿಗಾಗಿ ನೈಸ್ ರಸ್ತೆಯ ಬಳಕೆದಾರರ ಶುಲ್ಕವನ್ನು ಮತ್ತಷ್ಟು ಏರಿಸಬೇಕಾಗಿ ಕಳಕಳಿಯ ವಿನಂತಿ.⇒

ಸುಘೋಷ ಸ. ನಿಗಳೆ, ಬೆಂಗಳೂರು

ಆಕ್ಷೇಪಾರ್ಹ ಮಾತು ಸರಿಯಲ್ಲ

ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಆಡಿರುವ ಆಕ್ಷೇಪಾರ್ಹ ಮಾತುಗಳು ಖಂಡನೀಯ. ಕಲಬುರಗಿ ಜಿಲ್ಲಾಧಿಕಾರಿ ವಿರುದ್ಧವೂ ಅಸಾಂವಿಧಾನಿಕ ಪದ ಬಳಸಿದ್ದರು. ಮಹಿಳಾ ಅಧಿಕಾರಿಗಳನ್ನೇ ಗುರಿಯಾಗಿಸಿ ಹೇಳಿಕೆ ನೀಡುವುದು ಜನಪ್ರತಿನಿಧಿಯಾದವರಿಗೆ ಶೋಭೆ ತರುವುದಿಲ್ಲ.

⇒ರಾಮಚಂದ್ರ ಮಂಚಲದೊರೆ,ಗುಬ್ಬಿ

ಆನ್ಲೈನ್ ಗೇಮ್ಗೆ ಕಡಿವಾಣ ಬೇಕು

ದಾವಣಗೆರೆಯ ಯುವಕನೊಬ್ಬ ಆನ್ಲೈನ್ ಗೇಮ್ನ ದುಶ್ಚಟಕ್ಕೆ ಸಿಲುಕಿ ₹18 ಲಕ್ಷ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ (ಪ್ರ.ವಾ., ಜುಲೈ 4). ಯುವಜನ ದಿಢೀರ್ ಶ್ರೀಮಂತರಾಗುವ ಆಸೆಗೆ ಬಿದ್ದು, ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಾನೂನುಬಾಹಿರವಾಗಿ ನಡೆಯುವ ಆನ್ಲೈನ್ ಗೇಮ್ಗಳ ವಿರುದ್ಧ ಕ್ರಮಕೈಗೊಳ್ಳದೆ ಸರ್ಕಾರವು ಜಾಣಕುರುಡು ಪ್ರದರ್ಶಿಸುತ್ತಿರುವುದು ಎಷ್ಟು ಸರಿ?

ಮುರುಗೇಶ ಡಿ., ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.