ಸಂಚಾರ ನಿಯಮ ಕಟ್ಟುನಿಟ್ಟಾಗಿ ಪಾಲನೆಯಾಗಲಿ

ಸಾರ್ವಜನಿಕರಿಗೆ ತೊಂದರೆಯಾಗುವುದಾದರೆ ವಾಹನಗಳ ಟೋಯಿಂಗ್ ಕ್ರಮ ನಿಲ್ಲಿಸುವುದಾಗಿ ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ. ಆದರೆ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚುತ್ತಿದೆ. ರಸ್ತೆ ಅಪಘಾತಗಳು, ವಾಹನ ಸವಾರರ ನಡುವಿನ ಘರ್ಷಣೆ ಪ್ರಕರಣಗಳು ಮಿತಿಮೀರಿವೆ. ಇದಕ್ಕೆ ಪರಿಹಾರವೆಂದರೆ, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದು. ಮೊಬೈಲ್ ಫೋನ್ನಲ್ಲಿ ಮಾತನಾಡುವುದರಲ್ಲಿ ಮಗ್ನರಾಗಿ ಬೇಜವಾಬ್ದಾರಿಯಿಂದ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ, ಸಾರ್ವಜನಿಕರ ಹಿತದೃಷ್ಟಿಯಿಂದ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾಗಿದೆ.

⇒ಅಶೋಕ ಎನ್.ಎಚ್., ಕೋಲಾರ

ಸಿಬಿಎಸ್ಇ ನಿರ್ದೇಶನ ಸರಿಯಾಗಿದೆ

ಶಿಕ್ಷಣದ ಆರಂಭಿಕ ಐದು ವರ್ಷಗಳ ಅಡಿಪಾಯದ ಕಲಿಕೆಯು ಕಡ್ಡಾಯವಾಗಿ ಮಗುವಿನ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಆಗಬೇಕು ಮತ್ತು ಅದು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಬೇಕು ಎಂದು ಸಿಬಿಎಸ್ಇ ಪಠ್ಯಕ್ರಮ ಅನುಸರಿಸುವ, ದೇಶದ ಸುಮಾರು ಮೂವತ್ತು ಸಾವಿರ ಶಾಲೆಗಳಿಗೆ ಸಿಬಿಎಸ್ಇ ನಿರ್ದೇಶನ ನೀಡಿರುವುದು ಸರಿಯಾಗಿದೆ. ಮಾತೃಭಾಷೆ ಅಥವಾ ಪರಿಸರದ ಭಾಷೆಯಲ್ಲಿನ ಆರಂಭಿಕ ಕಲಿಕೆಯ ಮಹತ್ವವನ್ನು ಸಿಬಿಎಸ್ಇ ತಡವಾಗಿಯಾದರೂ ಮನಗಂಡಿದೆ. ರಾಷ್ಟ್ರೀಯ ಶಿಕ್ಷಣ ನೀತಿ– 2020ರ ಅಡಿ ಮಗುವಿನ ಆರಂಭಿಕ ಕಲಿಕಾ ಮಾಧ್ಯಮದ ಕುರಿತು ಇದ್ದ ಅಸ್ಪಷ್ಟತೆಯನ್ನು ಇದು ಹೋಗಲಾಡಿಸಿದೆ. ವಾಮಮಾರ್ಗದ ಮೂಲಕ ಆರಂಭದಲ್ಲಿ ಮತ್ತೆ ಇಂಗ್ಲಿಷ್ ಮಾಧ್ಯಮ ನುಸುಳಲು ಅವಕಾಶವಾಗದಂತೆ, ಮಕ್ಕಳ ಕಲಿಕೆಯನ್ನು ಮಾತೃಭಾಷೆಯ ಮೂಲಕ ಸರಳವಾಗಿಸಲು ಶಾಲೆಗಳು ಈಗ ಮುಂದಾಗಬೇಕು. ಇದರಿಂದ ಶಾಲೆಗಳಿಗೂ ಮಕ್ಕಳಿಗೂ ಅನುಕೂಲವಾಗುತ್ತದೆ. ನಂತರದ ಹಂತದಲ್ಲಿ ಇಂಗ್ಲಿಷ್ ಕೂಡ ಇದ್ದೇ ಇರುತ್ತದೆ.

ರಾಜ್ಯ ಸರ್ಕಾರ ಸಹ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಪ್ರಾಥಮಿಕ ಹಂತದಲ್ಲಿ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿ ಕಲಿಕೆಗೆ ಮುಂದಾಗಬೇಕು. ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮದಲ್ಲಿನ ಕಲಿಕೆ ಕುರಿತು ರಾಜ್ಯ ನಡೆಸಿದ ದೀರ್ಘಕಾಲಿಕ ನ್ಯಾಯಾಂಗ ಹೋರಾಟಕ್ಕೆ ಈಗ ತಾತ್ವಿಕ ಬೆಂಬಲ ಸಿಕ್ಕಂತೆ ಆಗಿದೆ. ಆದ್ದರಿಂದ ಸರ್ಕಾರವು ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸುವುದನ್ನು ನಿಲ್ಲಿಸಬೇಕು ಮತ್ತು ಕನ್ನಡದಲ್ಲಿ ಗುಣಮಟ್ಟದ ಆರಂಭಿಕ ಶಿಕ್ಷಣ ನೀಡುವ ಮೂಲಕ ಮಕ್ಕಳು ಮತ್ತು ಶಿಕ್ಷಕರು ಅನುಭವಿಸುತ್ತಿರುವ ಎಡರುತೊಡರುಗಳನ್ನು ನಿವಾರಿಸಲು ಕ್ರಮ ತೆಗೆದುಕೊಳ್ಳಬೇಕು.

⇒ವೆಂಕಟೇಶ ಮಾಚಕನೂರ, ಧಾರವಾಡ

ಬಾಯ್ತೆರೆದು ನಿಂತ ಹೊಂಡ: ಮುಕ್ತಿ ಸಿಗುವುದೆಂದು?

ರಾಜ್ಯದ ಬಹುತೇಕ ಕಡೆಗಳಲ್ಲಿ ಹೆದ್ದಾರಿಯ ರಸ್ತೆ ವಿಸ್ತರಣೆ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳ ನಿಮಿತ್ತ ರಸ್ತೆ ಮಧ್ಯದಲ್ಲಿ ಹಲವಾರು ಹೊಂಡಗಳಾಗಿವೆ. ಒಂದು ಹೊಂಡ ತಪ್ಪಿಸಲು ಹೋದರೆ ಮತ್ತೊಂದು ಗುಂಡಿ ಸಿದ್ಧವಿರುತ್ತದೆ. ಮಳೆಗಾಲದಲ್ಲಿ ರಸ್ತೆಯಲ್ಲೆಲ್ಲಾ ನೀರು ತುಂಬಿರುವಾಗ ಬಾಯ್ತೆರೆದು ನಿಂತ ಹೊಂಡಗಳಿಗೆ ವಾಹನ ಸವಾರರು ಬಿದ್ದು ಅಪಘಾತಗಳಿಗೆ ಈಡಾಗುತ್ತಿದ್ದಾರೆ. ಇನ್ನಾದರೂ ಸರ್ಕಾರ ತಕ್ಷಣವೇ ಗುಂಡಿ ಮುಚ್ಚುವ ಕೆಲಸಕ್ಕೆ ಮುಂದಾಗಬೇಕಿದೆ.

⇒ಸುರೇಂದ್ರ ಪೈ, ಭಟ್ಕಳ

ತ್ವರಿತ ನ್ಯಾಯದ ಆಶಯ ಸಾಕಾರವಾಗಲಿ

ಸಿವಿಲ್ ಪ್ರಕರಣಗಳ ತ್ವರಿತ ವಿಲೇವಾರಿ ಉದ್ದೇಶದಿಂದ ಕೇಂದ್ರದ ‘ಸಿವಿಲ್ ಪ್ರಕ್ರಿಯಾ ಸಂಹಿತೆ (ಸಿಪಿಸಿ) ಕಾಯ್ದೆ’ಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಗಳು ರಾಷ್ಟ್ರಪತಿಯವರ ಅಂಕಿತ ಪಡೆದು ತಕ್ಷಣದಿಂದಲೇ ಜಾರಿಗೆ ಬಂದಿರುವುದು (ಪ್ರ.ವಾ., ಮೇ 27) ಸ್ವಾಗತಾರ್ಹ. ಕೋರ್ಟ್ ವ್ಯಾಜ್ಯದಲ್ಲಿ ಗೆದ್ದವನು ಸೋತ, ಸೋತವನು ಸತ್ತ ಎನ್ನುವ ನಾಣ್ಣುಡಿ ಇದೆ. ಇದನ್ನು ತೊಡೆದುಹಾಕುವ ದಿಸೆಯಲ್ಲಿ ಈ ಕಾಯ್ದೆ ಎಷ್ಟರಮಟ್ಟಿಗೆ ಕೆಲಸ ಮಾಡುತ್ತದೆ ಎನ್ನುವುದನ್ನು ನೋಡಬೇಕಾಗಿದೆ. ಪ್ರಕರಣಗಳ ವಿಲೇವಾರಿಗೆ ಎರಡು ವರ್ಷದ ಕಾಲಮಿತಿ ನಿಗದಿಪಡಿಸಿರುವುದರಿಂದ ಶೀಘ್ರ ವಿಲೇವಾರಿಗೆ ಅನುಕೂಲ ಆಗಬಹುದು. ದೇಶದ ಎಲ್ಲಾ ರಾಜ್ಯಗಳು ಇದನ್ನು ಅನುಸರಿಸಬೇಕು ಹಾಗೂ ಕ್ರಿಮಿನಲ್ ಪ್ರಕರಣಗಳಿಗೂ ಇದೇ ರೀತಿಯ ತಿದ್ದುಪಡಿಯ ಅವಶ್ಯಕತೆ ಇದೆ. ಕಾನೂನು ಸಚಿವಾಲಯ ಈ ಬಗ್ಗೆ ಗಮನ ಹರಿಸ ಬೇಕು. ಪ್ರಕರಣಗಳ ವಿಲೇವಾರಿ ಎರಡು– ಮೂರು ತಲೆಮಾರುಗಳವರೆಗೂ ಮುಂದುವರಿಯುವಂತಹ ವಿಪರ್ಯಾಸ ವನ್ನು ಇಂತಹ ತಿದ್ದುಪಡಿ ಕೊನೆಗಾಣಿಸುತ್ತದೆ.

⇒ಮುಳ್ಳೂರು ಪ್ರಕಾಶ್, ಮೈಸೂರು

ವರ್ಗಾವಣೆ ಮಾರ್ಗಸೂಚಿ: ಪ್ರಹಸನವಾದೀತು!

ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ವರ್ಗಾವಣೆ ಮಾರ್ಗಸೂಚಿ ಗಳನ್ನು ಹೊರಡಿಸಿ, ಅವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರತಿವರ್ಷವೂ ಮುಖ್ಯ ಕಾರ್ಯದರ್ಶಿಯಿಂದ ಇಂತಹ ಸೂಚನೆಗಳು ಯಥಾಪ್ರಕಾರ ಹೊರಡುವುದು, ಮಾರ್ಗಸೂಚಿಗಳು ಉಲ್ಲಂಘನೆ ಆಗುವುದು, ಬಾಧಿತರು ಕೆಎಟಿ ಮತ್ತು ಹೈಕೋರ್ಟ್ ಮೊರೆ ಹೋಗುವುದು ಮಾಮೂಲಾಗಿದೆ. ರಾಜ್ಯ ಸರ್ಕಾರದ ಸಚಿವಾಲಯದಲ್ಲಿ ಉನ್ನತ ಸ್ಥಾನದಲ್ಲಿದ್ದು, ನೌಕರರ ಸೇವಾ ವಿಷಯಗಳನ್ನು ನಿರ್ವಹಿಸಿ ನಿವೃತ್ತರಾಗಿರುವ ನನ್ನ ಹಿರಿಯ ಮಿತ್ರರೊಬ್ಬರ ಪ್ರಕಾರ, 1980ರ ದಶಕದ ಆದಿಭಾಗದಿಂದ ವರ್ಗಾವಣೆ ಎಂಬುದೊಂದು ದಂಧೆಯಾಗಿ ಮಾರ್ಪಟ್ಟಿದೆ. ಅದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳ ಉಲ್ಲಂಘನೆ ಮಾಮೂಲಿಯಾಗಿದೆ. ಸಕಾರಣವಿಲ್ಲದ ಅವಧಿಪೂರ್ಣ ವರ್ಗಾವಣೆಯೇ ಅದರಲ್ಲಿ ಪ್ರಮುಖವಾದದ್ದು.

ಪ್ರಭಾವಿ ನೌಕರರು ತಮಗೆ ಬೇಕಾದ ಶಾಸಕರನ್ನೋ ಸಚಿವರನ್ನೋ ಹಿಡಿದು, ಜೊತೆಗೆ ಹಣವನ್ನೂ ಖರ್ಚು ಮಾಡಿ ತಮಗೆ ಬೇಕಾದ ಹುದ್ದೆಗಳಿಗೆ ವರ್ಷದಲ್ಲಿ ಯಾವಾಗ ಬೇಕಾದರೂ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ, ಪ್ರಭಾವಿಗಳಲ್ಲ ದವರು ಯಾರಿಗೂ ಬೇಡದ ಹುದ್ದೆಗಳಿಗೆ ವರ್ಗಾವಣೆಗೊಳ್ಳುತ್ತಾರೆ. ಹುದ್ದೆಯನ್ನೇ ತೋರಿಸದಿರುವ ಕೆಲವರಂತೂ ಸಂಬಳವೂ ಇಲ್ಲದೆ ಹುದ್ದೆಗಾಗಿ ದೀರ್ಘಕಾಲ ಕಾಯಬೇಕಾಗುತ್ತದೆ. ಪ್ರತಿವರ್ಷದ ವರ್ಗಾವಣೆಯ ಮಾರ್ಗಸೂಚಿಯಂತೆ ಈ ವರ್ಷದ್ದೂ ಒಂದು ಪ್ರಹಸನವಾಗಿಯೇ ಅಂತ್ಯಗೊಳ್ಳದಿರಲಿ ಎಂಬುದು ಆಶಯ!

⇒ತಿಪ್ಪೂರು ಪುಟ್ಟೇಗೌಡ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.