ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರತಮ್ಯ ನಿವಾರಣೆ ಕ್ರಮ: ಕಟ್ಟುನಿಟ್ಟಾಗಿ ಜಾರಿಯಾಗಲಿ

Last Updated 9 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಇತ್ತೀಚೆಗೆ ಬಿಡುಗಡೆಯಾಗಿರುವ ವಿಶ್ವ ಆರ್ಥಿಕ ವೇದಿಕೆಯ ಗ್ಲೋಬಲ್‌ ಜೆಂಡರ್‌ ಗ್ಯಾಪ್‌ ರಿಪೋರ್ಟ್‌– 2021 ವರದಿಯಲ್ಲಿ, ಜಗತ್ತಿನ 156 ದೇಶಗಳ ರ್‍ಯಾಂಕ್‌‌ ಪಟ್ಟಿಯಲ್ಲಿ ಭಾರತದ ಸ್ಥಾನ 140ಕ್ಕೆ ಇಳಿದಿರುವುದು ಕಳವಳಕಾರಿ. 2020ರ ವರದಿಯಲ್ಲಿ 112ನೇ ಸ್ಥಾನ ಪಡೆದಿದ್ದ ಭಾರತ ಈ ಬಾರಿ 28 ಸ್ಥಾನಗಳ ಕುಸಿತ ಕಂಡಿದೆ. ಮಹಿಳೆ ಹಿಂದಿನಂತಲ್ಲದೆ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಬೇರೆಬೇರೆ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಪುರುಷನಿಗೆ ಸಮಾನವಾಗಿ ಬದುಕಬಲ್ಲಳು. ಆದರೂ ಮಹಿಳೆ ಸಮಾಜದಲ್ಲಿ ತಾರತಮ್ಯಕ್ಕೆ ಗುರಿಯಾಗುತ್ತಿರುವುದು ದುಃಖದ ಸಂಗತಿ.

ಮಹಿಳಾ ಸಬಲೀಕರಣ, ಮಹಿಳಾ ಮೀಸಲಾತಿ, ಸಮಾನ ವೇತನ ಕಾಯ್ದೆ ಎಲ್ಲವೂ ಬರವಣಿಗೆ ರೂಪದಲ್ಲಿ ಮಾತ್ರ ಇರದೆ ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ಬರಬೇಕಾಗಿದೆ.

–ನಿರ್ಮಲ ನಾಗೇಶ್, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT