ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಯ ಘನತೆ ಹೆಚ್ಚಿಸಲಿ

Last Updated 16 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಎಂಜಿನಿಯರಿಂಗ್‌ ಪದವೀಧರರು ಪ್ರಾಥಮಿಕ ಶಾಲಾ ಶಿಕ್ಷಕ ವೃತ್ತಿಗೆ ಸೂಕ್ತರೋ ಅಲ್ಲವೋ ಅನ್ನುವ ಮಾತು ನಂತರ ಇರಲಿ. ಮೊದಲು ಶಿಕ್ಷಕ ವೃತ್ತಿಗೆ ಬೇಕಾದ ಮಾನದಂಡ, ತ್ಯಾಗ, ಸಮರ್ಪಣಾ ಮನೋಭಾವ ಆ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಯಲ್ಲಿ ಇದೆಯೇ ಎಂಬುದನ್ನು ಗಮನಿಸಬೇಕು. ಹಾಗೊಮ್ಮೆ ಈ ಎಲ್ಲ ಗುಣಗಳು ಅವರಲ್ಲಿ ಇದ್ದಿದ್ದೇ ಆದರೆ, ಅವರು ಯಾವ ಶೈಕ್ಷಣಿಕ ಹಿನ್ನೆಲೆಯಿಂದ ಬಂದಿದ್ದರೂ ಸರಿ, ಶಿಕ್ಷಕರಾಗಲು ಅರ್ಹರು. ಹೀಗಾಗಿ, ಶಿಕ್ಷಕರಾಗಲು ಸಂಬಂಧಿಸಿದ ಪದವಿ ಪತ್ರಗಳಿದ್ದರಷ್ಟೇ ಸಾಲದು, ಆ ವೃತ್ತಿಯ ಬಗ್ಗೆ ಅತೀವ ಒಲವು ಇರಬೇಕಾದುದು ಅತ್ಯಗತ್ಯ.

ಶಿಕ್ಷಕ ವೃತ್ತಿ ಕೇವಲ ವೃತ್ತಿಯಷ್ಟೇ ಅಲ್ಲ, ಅದೊಂದು ಪವಿತ್ರ ಕಾಯಕ. ಎಲ್ಲೂ ಸಲ್ಲದವರು ಇಲ್ಲಿ ಸೇರಿ ಈ ವೃತ್ತಿಯ ಗುಣಮಟ್ಟವನ್ನು ಕಳಪೆಗೊಳಿಸುವುದಕ್ಕಿಂತ, ಸಲ್ಲುವವರು ಯಾರೇ ಆಗಿರಲಿ ಇಲ್ಲಿ ಸೇರಿ, ಈ ವೃತ್ತಿಯ ಘನತೆಯನ್ನು ಹೆಚ್ಚಿಸಬೇಕು.

–ಮುಹಮ್ಮದ್ ಯೂನುಸ್‌ ಸಾರವಾನ್, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT