ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಪರಿಸರ ಸಂರಕ್ಷಣೆ: ಆದ್ಯತೆಯಾಗದ ಸೂತ್ರ

Last Updated 14 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

‘ಇಐಎ ಕರಡಿಗೆ ಎಲ್ಲೆಲ್ಲೂ ಕೆಂಬಾವುಟ' ಎಂಬ ಲೇಖನದಲ್ಲಿ ನಾಗೇಶ ಹೆಗಡೆಯವರು ಬರೆದಿರುವ ವಿಚಾರಗಳು (ಪ್ರ.ವಾ., ಆ. 13) ಪರಿಸರ ಸಂರಕ್ಷಣೆಯ ಕುರಿತು ಕಾನೂನು ರೂಪಿಸುವವರು ಓದಲೇಬೇಕಾದಂತಹವು. ಭಾರತದಂಥ ಅಭಿವೃದ್ಧಿಶೀಲ ರಾಷ್ಟ್ರವೊಂದು ಯಾವುದೇ ಅಭಿವೃದ್ಧಿ ಯೋಜನೆಯನ್ನು ಕೈಗೊಳ್ಳುವ ಮೊದಲು ಪರಿಸರ ಸಂರಕ್ಷಣೆಗೆ ಏನೆಲ್ಲಾ ಎಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ಬಹಳ ಹಿಂದೆಯೇ ಮಾರ್ಗಸೂಚಿಗಳನ್ನುಹಾಕಿಕೊಂಡಿದ್ದರೂ ಅವು ಕಡತದಲ್ಲಿಯೇ ಉಳಿದಿರುವುದು ವಿಪರ್ಯಾಸ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಸಂರಕ್ಷಣಾ ಸೂತ್ರಗಳನ್ನು ಗಾಳಿಗೆ ತೂರುವ ಪರಿಪಾಟ ನಿಲ್ಲಬೇಕು.

-ಮಂಜುನಾಥ್ ಟಿ.ಎಸ್., ತರುವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT