ಪಿಯುಸಿ ಪರೀಕ್ಷಾ ಮಂಡಳಿಯು ಪರೀಕ್ಷಾ ಕೊಠಡಿ ಮೇಲ್ವಿಚಾರಕರನ್ನು ಅತ್ಯಂತ ಕೆಳಮಟ್ಟದಲ್ಲಿ ಕಾಣುತ್ತಿದೆ. ಒಬ್ಬ ಪರೀಕ್ಷಾ ಕೊಠಡಿ ಮೇಲ್ವಿಚಾರಕನ ಒಂದು ದಿನದ ಭತ್ಯೆ ₹ 95. ಈ ಸಾಲಿನಲ್ಲಿ ಕಾರ್ಯ ನಿರ್ವಹಿಸಿದರೆ ಭತ್ಯೆಯನ್ನು ಮುಂದಿನ ಸಾಲಿನಲ್ಲಿ ಕೊಡಲಾಗುತ್ತದೆ. ಆದರೆ, ರಾಜ್ಯ ಸರ್ಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಕೊಠಡಿ ಮೇಲ್ವಿಚಾರಕರ ಭತ್ಯೆ ₹750-1000ದವರೆಗೆ ಇರುತ್ತದೆ. ಅದನ್ನು ಪರೀಕ್ಷೆಯ ನಂತರ ಹೆಚ್ಚು ವಿಳಂಬವಿಲ್ಲದೇ ಕೊಡಲಾಗುತ್ತದೆ. ಸರ್ಕಾರ ಹೀಗೆ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಿರುವುದು ಎಷ್ಟು ಸರಿ? ಕೆಲಸ ಅಚ್ಚುಕಟ್ಟಾಗಿ ಆಗಬೇಕು, ಸಂಭಾವನೆ ಮಾತ್ರ ವಿಳಂಬ ಎಂದರೆ ಹೇಗೆ?

ಈ ರೀತಿಯ ಪರೀಕ್ಷೆಗಳಲ್ಲಿ ಬಹುತೇಕ ಅರೆಕಾಲಿಕ ಉಪನ್ಯಾಸಕರೇ ಮೇಲ್ವಿಚಾರಕರಾಗಿ ಕೆಲಸ ನಿರ್ವಹಿಸು
ತ್ತಾರೆ ಎಂಬುದನ್ನು ಪರೀಕ್ಷಾ ಮಂಡಳಿ ನೆನಪಿನಲ್ಲಿ ಇಡಬೇಕು. ಕೆಲಸಕ್ಕೆ ತಕ್ಕಂತೆ ಭತ್ಯೆ ನೀಡಲು ಕ್ರಮ ಕೈಗೊಳ್ಳಬೇಕು.

–ಸಂಪತ್ ಆಕಳವಾಡಿ,ಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.