ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆಪತ್ರಿಕೆ: ಅಸಡ್ಡೆ ಏಕೆ?

Last Updated 29 ಜನವರಿ 2021, 19:30 IST
ಅಕ್ಷರ ಗಾತ್ರ

ಕಳೆದ ಸಾಲಿನಲ್ಲಿ 10ನೇ ತರಗತಿಯ ಅಂಧ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆಯ ಪ್ರಶ್ನೆಪತ್ರಿಕೆಯ 5ನೇ ಪುಟದಲ್ಲಿನ 33ನೇ ಪ್ರಶ್ನೆಯಲ್ಲಿ ಚಿತ್ರವೊಂದನ್ನು ಕೊಡಲಾಗಿತ್ತು. ಆ ಚಿತ್ರಕ್ಕೆ ಸಂಬಂಧಿಸಿದಂತೆ ‘ನಿಮಗೆ ಅನಿಸಿದನ್ನು ಒಂದು ಪ್ಯಾರಾ ಬರೆಯಿರಿ’ ಎಂದು ಕೇಳಲಾಗಿತ್ತು. ಅಂಧ ಮಕ್ಕಳು ಆ ಚಿತ್ರವನ್ನು ನೋಡಿ ಬರೆಯಲು ಸಾಧ್ಯವೇ?

ಪರೀಕ್ಷಾ ಮಂಡಳಿ ಪ್ರತೀ ಸಾರಿ ಇಂತಹ ತಪ್ಪುಗಳನ್ನು ಮಾಡುವುದು, ನಂತರ ಅದಕ್ಕೆ ಗ್ರೇಸ್ ಮಾರ್ಕ್ಸ್ ಕೊಡುವುದನ್ನು ಅಭ್ಯಾಸ ಮಾಡಿಕೊಂಡಿದೆ. ಇದರಿಂದ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದಂತೆ ಆಗುತ್ತದೆಯೇ? ಇನ್ನು ಮುಂದಾದರೂ ಇಂಥ ತಪ್ಪುಗಳು ಪುನರಾವರ್ತನೆ ಆಗದಂತೆ ಮಂಡಳಿ ಎಚ್ಚರ ವಹಿಸಲಿ.

- ಚಂದ್ರಶೇಖರ ಪುಟ್ಟಪ್ಪ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT