ಶನಿವಾರ, ಫೆಬ್ರವರಿ 29, 2020
19 °C

ಆರ್‌ಬಿಐ ಮೇಲೆ ಆರೋಪ ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕಿನ ಗ್ರಾಹಕರು ತಮ್ಮ ಖಾತೆಯಿಂದ ಹಣ ವಾಪಸ್‌ ಪಡೆಯಲು ಆರ್‌ಬಿಐ ಹೇರಿರುವ ನಿರ್ಬಂಧದಿಂದ ಆತಂಕಕ್ಕೆ ಒಳಗಾಗಿರುವ ಬಗ್ಗೆ ಪತ್ರಿಕಾ ವರದಿಗಳು ಬರುತ್ತಿವೆ. ಈ ಸಂಬಂಧ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು, ‘ಬ್ಯಾಂಕ್ ಚೆನ್ನಾಗಿಯೇ ನಡೆಯುತ್ತಿದ್ದು, ಜ. 10ರವರೆಗೂ ಗ್ರಾಹಕರಿಗೆ ಮಾಮೂಲಿನಂತೆ ಸೇವೆಯನ್ನು ಒದಗಿಸಿದ್ದೇವೆ. ಆದರೂ ಬ್ಯಾಂಕಿನ ವಹಿವಾಟಿಗೆ ಆರ್‌ಬಿಐ ಏಕಾಏಕಿ ನಿರ್ಬಂಧ ಹೇರಿ ನಮ್ಮ ಕೈಕಟ್ಟಿಹಾಕಿದೆ’ ಎಂಬ ರೀತಿ ಹೇಳುತ್ತಾ ಬಂದಿದ್ದಾರೆ.

ಬ್ಯಾಂಕಿನ ಈ ನಿಲುವು, ಶಾಲಾ ವಿದ್ಯಾರ್ಥಿಯೊಬ್ಬ ಶಾಲೆಯಿಂದ ಮನೆಗೆ ಬಂದು ಪೋಷಕರಿಗೆ ‘ಇವತ್ತು ನಾನು ಏನೂ ತಪ್ಪು ಮಾಡಲಿಲ್ಲ. ಆದರೂ ಮೇಷ್ಟರು ನನಗೆ ಹೊಡೆದರು’ ಎಂದು ಹೇಳಿದಂತಿದೆ. ತಪ್ಪು ಮಾಡದಿದ್ದರೆ ಮೇಷ್ಟರು ಯಾಕೆ ಹೊಡೆಯುತ್ತಾರೆ? ಬ್ಯಾಂಕಿನ ಆಡಳಿತ ಮಂಡಳಿಯು ತಪ್ಪು ಹೆಜ್ಜೆ ಇಟ್ಟು ಅವ್ಯವಹಾರ ಮಾಡಿರುವುದರಿಂದಲೇ ಆರ್‌ಬಿಐ ಈ ನಿರ್ಬಂಧವನ್ನು ಹೇರಿರುವುದು. ಆದ್ದರಿಂದ, ಮಂಡಳಿಯು ತೊಂದರೆಗೆ ಒಳಗಾಗಿರುವ ಗ್ರಾಹಕರನ್ನು ಸಮಾಧಾನಪಡಿಸುವ ಸಲುವಾಗಿ, ತಪ್ಪು ತನ್ನದಲ್ಲವೆಂದು ಹೇಳುತ್ತಾ ಆರ್‌ಬಿಐ ಕಡೆ ಬೆರಳು ತೋರುತ್ತಿರುವುದು ಸರಿಯಲ್ಲ.

–ಎಚ್.ಗುಂಡೂರಾವ್, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು