ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ವಿಶಾಲವಾಗಿ ಯೋಚಿಸೋಣ: ಮಿತಿಗಳನ್ನು ಮೀರೋಣ

Last Updated 28 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಬಸವೇಶ್ವರ ವೃತ್ತದಲ್ಲಿನ ಅಶ್ವಾರೂಢ ಬಸವೇಶ್ವರರ ಮರುವಿನ್ಯಾಸಗೊಂಡ ಪ್ರತಿಮೆಯನ್ನು ಮುಖ್ಯಮಂತ್ರಿ ಇತ್ತೀಚೆಗೆ ಉದ್ಘಾಟಿಸಿದ್ದಾರೆ. ಈ ಸಂಬಂಧ ನಿಕಟಪೂರ್ವ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಅವರನ್ನು ಅಭಿನಂದಿಸಿ ವೀರಶೈವ ಲಿಂಗಾಯತ ಸಮಾಜವು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದೆ (ಪ್ರ.ವಾ., ಆ. 28). ಇದನ್ನು ನೋಡಿದರೆ, ನಿಕಟಪೂರ್ವ ಮೇಯರ್‌ ತಮ್ಮ ಸೇವಾವಧಿಯಲ್ಲಿ ಹೆಚ್ಚಿನ ಅನುದಾನವನ್ನು ಪ್ರತಿಮೆಗಳ ಸ್ಥಾಪನೆಗೆ ನೀಡಿದರೇನೋ ಎಂಬ ಅನುಮಾನ ಮೂಡದಿರದು. ಬಸವಣ್ಣನವರನ್ನು ಮತ್ತು ಸಿದ್ಧಗಂಗಾ ಶ್ರೀಗಳನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂಬುದು ಜನಸಾಮಾನ್ಯರಿಗೂ ಗೊತ್ತಿದೆ. ಆದರೆ, ಜನರನ್ನು ಸಂಕುಚಿತ ನೆಲೆಯಲ್ಲಿ ಯೋಚಿಸುವಂತೆ ನಮ್ಮ ನಾಯಕರ ನಡವಳಿಕೆಗಳೇ ಪ್ರೇರೇಪಿಸುವಂತಿರುವುದು ದುರದೃಷ್ಟಕರ.

ಗಂಗಾಂಬಿಕೆ ಅವರ ಅವಧಿಯಲ್ಲಿ ನೀಡಿದ ಅನುದಾನದಿಂದ ಪ್ರತಿಮೆಯನ್ನು ನವೀಕರಿಸಲಾಗಿದ್ದರೂ ಉದ್ಘಾಟನೆಯ ಸಂದರ್ಭದಲ್ಲಿ ಅವರಿಗೆ ಸರ್ಕಾರವು ಸೂಕ್ತ ರೀತಿಯಲ್ಲಿ ಮನ್ನಣೆ ಕೊಡಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಧೋರಣೆ ವಿರುದ್ಧ ವೀರಶೈವ ಯುವ ಘಟಕದವರನ್ನು ಹೊರತುಪಡಿಸಿ ಹಿರಿಯರಾರೂ ಧ್ವನಿ ಎತ್ತಲಿಲ್ಲ. ಮಹಿಳಾ ಘಟಕವೂ ಇವರ ಬೆಂಬಲಕ್ಕೆ ನಿಲ್ಲಲಿಲ್ಲ. ಇದೇನೇ ಇರಲಿ, ಇಂತಹ ಕೆಲಸಗಳು ಪಕ್ಷ, ಜಾತಿಯ ಮಿತಿಗಳನ್ನು ಮೀರಬೇಕಾದುದು ಅಗತ್ಯ.

-ಉಮೇಶಕುಮಾರ,ಸೊರಟೂರು, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT