ಶುಕ್ರವಾರ, ಜುಲೈ 1, 2022
27 °C

ವಾಚಕರ ವಾಣಿ | ಗೋಮಾಳ ಪರಭಾರೆ: ತನಿಖೆಗೆ ಅನುಮತಿ ಕೊಡಿ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

‘37 ಎಕರೆ ಗೋಮಾಳ ಪರಭಾರೆ; ಅಧಿಕಾರಿಗೆ ರಕ್ಷಣೆ’ (ಪ್ರ.ವಾ., ಫೆ. 18). ಅಧಿಕಾರಕ್ಕೆ ಬರುವ ಯಾವುದೇ ಪಕ್ಷ ತಮ್ಮದು ಭ್ರಷ್ಟಾಚಾರಮುಕ್ತ ಸರ್ಕಾರ ಎಂದು ಶಂಖನಾದ ಮಾಡುತ್ತಲೇ ಇರುತ್ತದೆ. ಆದರೆ, ಅದರ ವರ್ತನೆ ತದ್ವಿರುದ್ಧವಾಗಿರುತ್ತದೆ. ಅಂದಾಜು ₹ 200 ಕೋಟಿ ಮೌಲ್ಯದ 37 ಎಕರೆ ಗೋಮಾಳವನ್ನು ಪರಭಾರೆ ಮಾಡಿರುವ ಅಧಿಕಾರಿ ಕೆ.ರಂಗನಾಥ್ ವಿರುದ್ಧ ತನಿಖೆ ನಡೆಸಲು ಅನುಮತಿ ಕೋರಿದ್ದ ಭ್ರಷ್ಟಾಚಾರ ನಿಗ್ರಹ ದಳದ ಪ್ರಸ್ತಾವವನ್ನು ರಾಜ್ಯ ಸರ್ಕಾರ ತಿರಸ್ಕರಿಸಿರುವುದು ಇಬ್ಬಂದಿತನದ ದ್ಯೋತಕವಾಗಿದೆ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯ ಶಿಫಾರಸನ್ನೂ ಗಣನೆಗೆ ತೆಗೆದುಕೊಳ್ಳದ ಸರ್ಕಾರವು ಆರೋಪಿ ಅಧಿಕಾರಿಯ ತಲೆಕಾಯಲು ನಿಂತಿರುವುದು ನಿಜಕ್ಕೂ ದುರಂತವೇ ಸರಿ.

ಈ ಅಧಿಕಾರಿಯು ರಾಜ್ಯ ಸರ್ಕಾರವನ್ನೇ ಮಣಿಸುವಷ್ಟು ಪ್ರಭಾವಶಾಲಿಯೇ ಎಂಬ ಅನುಮಾನ ಹುಟ್ಟುತ್ತದೆ. ಸರ್ಕಾರ ತನ್ನ ನಿಲುವು ಬದಲಿಸಿಕೊಂಡು ತನಿಖೆಗೆ ಅನುಮತಿ ನೀಡುವುದರ ಮೂಲಕ ತನ್ನ ಘನತೆ ಉಳಿಸಿಕೊಳ್ಳಬೇಕಾಗಿದೆ. ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ರವಾನಿಸಬೇಕಾಗಿದೆ. 
‌‌‌‌‌
-ಮೋದೂರು ಮಹೇಶಾರಾಧ್ಯ, ಹುಣಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು