ಮಾದಕವಸ್ತು ಪ್ರಕರಣಗಳಲ್ಲಿ ಸೆಲೆಬ್ರಿಟಿಗಳು, ಉದ್ಯಮಿಗಳು, ರಾಜಕಾರಣಿಗಳು ಮತ್ತು ಅವರ ಮಕ್ಕಳು, ಸಂಬಂಧಿಕರು ಹೆಚ್ಚಿಗೆ ಸಿಲುಕುತ್ತಿರುವುದು ಕಂಡುಬರುತ್ತಿದೆ. ಇದನ್ನು ನೋಡಿದರೆಬಿಡುವಿಲ್ಲದ ಜೀವನದ ಜಂಜಾಟದ ಮಧ್ಯೆ ತಮ್ಮ ಮಕ್ಕಳಿಗೆ ಒಳ್ಳೆಯ ಆಚಾರ-ವಿಚಾರ, ಸಾಮಾಜಿಕ ಕಳಕಳಿಯ ಅರಿವು ಮೂಡಿಸುವಲ್ಲಿ ಕೆಲವರು ವಿಫಲರಾಗಿದ್ದಾರೆ ಎನಿಸುತ್ತದೆ. ಶ್ರೀಮಂತರ ಮಕ್ಕಳಿಗೆ ಕೇಳಿದಷ್ಟು ಹಣ ಸುಲಭವಾಗಿ ಸಿಗುವುದರಿಂದ ಲೇಟ್‌ನೈಟ್ ಪಾರ್ಟಿ, ಮದ್ಯಸೇವನೆ, ಡ್ರಗ್ಸ್ ಸೇವನೆಯಂತಹ ದುಶ್ಚಟಗಳಿಗೆ ಅವರು ದಾಸರಾಗುವ ಅವಕಾಶಗಳು ಹೆಚ್ಚಿಗೆ ಇರುತ್ತವೆ. ಕೆಲವರು ಕುಡಿದ ಅಮಲಿನಲ್ಲಿ ಅಪಘಾತಗಳಿಗೆ ಕಾರಣರಾಗಿ ಅಮಾಯಕರ ಪ್ರಾಣ ತೆಗೆದಿರುವ, ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಿರುವ ಅನೇಕ ಉದಾಹರಣೆಗಳಿವೆ. ತಮ್ಮ ಮಕ್ಕಳು ಏನೇ ತಪ್ಪು ಮಾಡಿದರೂ ಸಮರ್ಥಿಸಿಕೊಳ್ಳುವವರಿದ್ದಾರೆ. ಅಂತಹವರು, ಪುತ್ರನ ವಿಷಯದಲ್ಲಿ ನಿರ್ದಾಕ್ಷಿಣ್ಯ ನಿರ್ಧಾರ ಕೈಗೊಂಡ ಹಾಲಿವುಡ್ ನಟ ಜಾಕಿಚಾನ್ ಅವರನ್ನು ನೋಡಿ ಕಲಿಯಬೇಕಾಗಿದೆ.

- ಮುರುಗೇಶ ಡಿ.,ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.