ಕೊರೊನಾ ಸೋಂಕು ನಮಗೆ ಅನೇಕ ಪಾಠಗಳನ್ನು ಕಲಿಸಿದೆ. ಇದರಲ್ಲಿ ವಾಯುಮಾಲಿನ್ಯ ತಡೆಯುವುದು, ಸ್ವಚ್ಛತೆ, ಸ್ವಾವಲಂಬನೆ ಮುಖ್ಯವಾದವು. ವಾಯುಮಾಲಿನ್ಯ ತಡೆಯಲು ನಾವೆಲ್ಲರೂ ಅಶಕ್ತರಾಗಿದ್ದಾಗ, ಪ್ರಕೃತಿಯೇ ಮುನಿದು ಎಲ್ಲ ಬಗೆಯ ವಾಹನ ಸಂಚಾರವೂ ಸಂಪೂರ್ಣ ಸ್ಥಗಿತಗೊಳ್ಳುವಂತೆ ನೋಡಿಕೊಂಡಿತು. ಇದರಿಂದ ಈ ವಾಹನಗಳು ಹೊರಹಾಕುವ ಇಂಗಾಲದ ಡೈಆಕ್ಸೈಡ್ ಹಾಗೂ ಹಾಳಾದ ರಸ್ತೆಗಳಿಂದ ಏಳುತ್ತಿದ್ದ ದೂಳು ಕಡಿಮೆಯಾದವು. ಈ ಬಾರಿ ಉತ್ತಮ ಮುಂಗಾರು ಮಳೆ ಆಗಲು ಈ ಬಗೆಯ ವೈಜ್ಞಾನಿಕ ಕಾರಣಗಳೂ ಇರಬಹುದೇನೊ? ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹತ್ತಾರು ವರ್ಷಗಳಿಂದ ಸರಿಯಾಗಿ ಮುಂಗಾರು ಮಳೆಯೇ ಆಗುತ್ತಿರಲಿಲ್ಲ. ಆದರೆ ಈ ವರ್ಷ ಸಂತೃಪ್ತ ಮುಂಗಾರು ಮಳೆಯಾಗಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಇನ್ನಾದರೂ ನಾವು ಪಾಠ ಕಲಿತು, ವಾಯುಮಾಲಿನ್ಯ ನಿಯಂತ್ರಣಕ್ಕೆ ಪ್ರಯತ್ನಿಸೋಣ. ಪರಿಸರಸ್ನೇಹಿ ವಾಹನಗಳಿಗೆ ಹೆಚ್ಚು ಪ್ರಾಮುಖ್ಯ ಸಿಗುವಂತಾಗಲಿ.

- ಗೋಡೆ ಶಿವರಾಜ್, ಸಿರಿಗೇರಿ, ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.