‘ಚಿತ್ರನಗರಿ’ಯನ್ನು ಮೈಸೂರಿನಲ್ಲಿಯೇ ಸ್ಥಾಪಿಸಬೇಕೆಂದು ಚಲನಚಿತ್ರ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಇತ್ತೀಚೆಗೆ ಒತ್ತಾಯಿಸಿದ್ದಾರೆ. ಚಲನಚಿತ್ರ ಕೈಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕೆ.ಕೆ.ಮೂರ್ತಿ, ಆನಂತರ ಅಧ್ಯಕ್ಷರಾದ ಕೆಂಪರಾಜ ಅರಸು ಅವರು ಚಿತ್ರನಗರಿಯು ಬೆಂಗಳೂರಿನಲ್ಲಿಯೇ ಆಗಬೇಕೆಂದು ಆಗಿನ ಸರ್ಕಾರಗಳಿಗೆ ವರದಿ ಸಲ್ಲಿಸಿದ್ದರು.

ಕನ್ನಡ ಚಲನಚಿತ್ರರಂಗ ಐವತ್ತು ವರ್ಷ ಪೂರೈಸಿದ ಸಂದರ್ಭದಲ್ಲಿ, ಆ ಉತ್ಸವ ಸಮಿತಿಯಲ್ಲಿದ್ದ ಪತ್ರಕರ್ತ ಬಿ.ವಿ.ವೈಕುಂಠರಾಜು ಅವರು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನು ಭೇಟಿ ಮಾಡಿ, ಡಾ. ರಾಜ್‍ಕುಮಾರ್ ಅವರ ನಾಯಕತ್ವ ಬಳಸಿಕೊಂಡು ‘ಚಿತ್ರನಗರಿ’ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕೆಂದು ಹೇಳಿದ್ದರು. ಈ ಕುರಿತು ಚಿತ್ರೋದ್ಯಮದ ಪರಾಮರ್ಶೆ ಅಗತ್ಯ.

ಆರ್.ವೆಂಕಟರಾಜು, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.