ಶನಿವಾರ, ಸೆಪ್ಟೆಂಬರ್ 18, 2021
28 °C

ಎಚ್ಚೆತ್ತುಕೊಳ್ಳಬೇಕಾದವರು ಯಾರೆಂದರೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಧ್ಯಮಗಳ ಇಂದಿನ ಸ್ಥಿತಿಗತಿ  ಕುರಿತು ಕೃಷ್ಣ ಪ್ರಸಾದ್ ಅವರು ಬರೆದಿರುವ ‘ಮಾಧ್ಯಮವೃಕ್ಷ ಕೊಳೆಯುತ್ತಿದೆಯೇ?’ ಲೇಖನ (ಪ್ರ.ವಾ., ಮೇ 9) ತುಂಬಾ ಸೂಕ್ತವಾಗಿದೆ.

ಬೆಳಿಗ್ಗೆ ಎದ್ದು ಟಿ.ವಿ. ಹಾಕಿದರೆ ಭಯ ಹುಟ್ಟಿಸುವ ಜ್ಯೋತಿಷಿಗಳ ದರ್ಶನ. ಮನರಂಜನೆ ಚಾನೆಲ್ ನೋಡಿದರೆ ಕಾಮೋದ್ರೇಕಗೊಳಿಸುವ ಸಿನಿಮಾ ಹಾಡುಗಳು, ಅತ್ತೆ– ಸೊಸೆ ಅಥವಾ ತ್ರಿಕೋನ ಪ್ರೇಮ ಕಥೆಯಾಧಾರಿತ, ಒಂದೇ ಮನೆಯಲ್ಲಿ ಒಬ್ಬರು ಇನ್ನೊಬ್ಬರನ್ನು ಕೊಲ್ಲುವ, ದ್ವೇಷ ಹುಟ್ಟಿಸುವ ಧಾರಾವಾಹಿಗಳು, ವಾಕರಿಕೆ ತರಿಸುವ ಬ್ರೇಕಿಂಗ್ ನ್ಯೂಸ್‌ಗಳು... ಇವುಗಳನ್ನು ಸಹಿಸಿಕೊಳ್ಳದೆ ಜನ ಕ್ರಿಕೆಟ್ ನೋಡಲು ಹೋದರೆ ಅಲ್ಲಿಯೂ ಹಲವರಿಗೆ ನಿರಾಸೆಯೇ ಕಾದಿರುತ್ತದೆ.

ಅದು ಈಗ ಮನರಂಜನಾತ್ಮಕ ಆಟವಾಗಿ ಉಳಿದಿಲ್ಲ. ಬದಲಿಗೆ ಬೆಟ್ಟಿಂಗ್‌ಗೋಸ್ಕರವೇ ಕ್ರಿಕೆಟ್ ನೋಡಬೇಕು ಎಂಬಷ್ಟು ವಾತಾವರಣ ಹಾಳಾಗಿದೆ. ಆನ್‌ಲೈನ್‌ ಬೆಟ್ಟಿಂಗ್ ಅಂತೂ ಆಘಾತಕಾರಿಯಾಗಿ ಬೆಳೆಯುತ್ತಿದೆ.

ಕೆಲವು ಟಿ.ವಿ ಮತ್ತು ಪತ್ರಿಕೆಗಳನ್ನು ನೋಡಿದರೆ, ಅವು ಒಂದು ಪಕ್ಷದ ಪರ ವಾಲಿರುವುದು ಜನಸಾಮಾನ್ಯನಿಗೂ ಅರ್ಥವಾಗುತ್ತದೆ. ನಿಖರ, ನೇರ, ಸತ್ಯ ಆಧಾರಿತ ವರದಿಗಳು ಸಾಮಾನ್ಯ ಪ್ರಜೆಗೆ ಸಿಗುವುದು ಕಷ್ಟ ಎಂಬಂತಾಗಿದೆ. ರಾಜಕಾರಣಿಗಳು, ಸರ್ಕಾರ, ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಪ್ರತಿದಿನ ವರದಿ ಮಾಡುವ ಮಾಧ್ಯಮಗಳು ಸ್ವತಃ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ.
-ಎಸ್.ನಾಗರಾಜ ನಾಗೂರ, ಬಾಗಲಕೋಟೆ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.