ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತ ಯೋಜನೆ ರೂಪಿಸಿ

Last Updated 9 ಜನವರಿ 2020, 17:31 IST
ಅಕ್ಷರ ಗಾತ್ರ

ಇಡೀ ವಿಶ್ವ ತನ್ನ ಕಡೆ ತಿರುಗಿನೋಡುವಂತೆ ಸೋಲಾರ್ ಪಾರ್ಕ್ ನಿರ್ಮಾಣವಾಗಿ ಪಾವಗಡ ಬೆಳಗುತ್ತಿರುವುದು ಸಂತೋಷದ ವಿಷಯ. ಆಂಧ್ರಪ್ರದೇಶದ ಗಡಿ ಹಂಚಿಕೊಂಡಿರುವ ಈ ತಾಲ್ಲೂಕು ಅಷ್ಟೇ ಸಮಸ್ಯೆಗಳನ್ನೂ ತನ್ನಲ್ಲಿ ಇಟ್ಟುಕೊಂಡಿದೆ. ಯಾವುದೇ ನದಿ, ನಾಲೆ ಆಸರೆ ಇಲ್ಲದ ಮತ್ತು ಅಂತರ್ಜಲ ಪಾತಾಳ ಮುಟ್ಟಿರುವ ಇದು ಶಾಶ್ವತ ಬರಪೀಡಿತ ಪ್ರದೇಶ. ಇಲ್ಲಿನ ರೈತರ ಬದುಕು ಕಷ್ಟಕರವಾಗಿದೆ. ಯುವಜನ ಬೇರೆ ದಾರಿಯಿಲ್ಲದೆ ಬದುಕಿಗಾಗಿ ರಾಜಧಾನಿ ಬೆಂಗಳೂರನ್ನು ಅಶ್ರಯಿಸುತ್ತಿದ್ದಾರೆ.

ಇಲ್ಲಿಯವರೆಗೂ ಆಳಿದ ಸರ್ಕಾರ ಮತ್ತು ಜನಪ್ರತಿನಿಧಿಗಳು ಈ ತಾಲ್ಲೂಕಿನ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ನೋವಿನ ವಿಚಾರ. ಸರ್ಕಾರ ಇನ್ನಾದರೂ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಿ, ಶಾಶ್ವತವಾದ ಯೋಜನೆಗಳನ್ನು ರೂಪಿಸಿ ತಾಲ್ಲೂಕಿನ ಕಷ್ಟಗಳಿಗೆ ಸ್ಪಂದಿಸಲಿ.

ಎಂ.ಎನ್.ರಾಘವೇಂದ್ರ,ಪಾವಗಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT