ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸಚಿವರಾದ ತರುವಾಯ...

Last Updated 14 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ತಮಗೆ ಬೇಕಾದ ಖಾತೆಗಾಗಿ ಹೋರಾಡುವುದಕ್ಕೆ ಹೊಸ ಸಚಿವರ ಆದ್ಯತೆ. ಅದರಲ್ಲಿ ಯಶಸ್ವಿಯಾದ ನಂತರ, ವಾಸ್ತು ಪ್ರಕಾರ ಅನುಕೂಲಕರ ಕೊಠಡಿ, ಸರ್ಕಾರಿ ವಸತಿಗೃಹ. ಬಳಿಕ ದುಬಾರಿ ವೆಚ್ಚದಲ್ಲಿ ಎರಡನ್ನೂ ನವೀಕರಿಸುವುದು. ಆನಂತರ ಅವರಿಗೆ ‘ಅನುಕೂಲಕರ ಸಿಬ್ಬಂದಿ’ಯ ನೇಮಕಾತಿ ಆಗುತ್ತದೆ. ಇವೆಲ್ಲವೂ ಅಧಿಕೃತ ಕಚೇರಿಯಲ್ಲಿ, ಗೃಹ ಕಚೇರಿಯಲ್ಲಿ ಹಾಗೂ ಸ್ವಕ್ಷೇತ್ರದಲ್ಲಿ ಆಗುವ ಸಾಮಾನ್ಯ ಕ್ರಿಯೆಗಳು.

ಬಳಿಕ ಹೊಸ ಕಾರು. ಇಲಾಖೆಯ ಕಾರ್ಯದರ್ಶಿ ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿ ಇರುವವರನ್ನು ಬದಲಾಯಿಸಿ, ಸಚಿವರ ಮರ್ಜಿಗೆ ಅನುಗುಣವಾಗಿ ನಡೆದುಕೊಳ್ಳುವವರನ್ನು ನೇಮಿಸಲಾಗುತ್ತದೆ. ಕಾನೂನು ಪಾಲಿಸುವವರಿಗಿಂತ ಸಚಿವರಿಗೆ ಅನುಕೂಲಕರ ಆಗಿರುವವರನ್ನು ನೇಮಿಸುವುದರಿಂದ, ಅಂತಹ ಇಲಾಖೆಯ ನಿರ್ಧಾರಗಳು ನಿಯಮಗಳ ಪ್ರಕಾರ ಇರುತ್ತವೆ ಎಂಬುದಕ್ಕೆ ಏನು ಖಾತರಿ?

ಮೋಹನದಾಸ ಕಿಣಿ, ಕಾಪು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT