ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯವಿವಾಹ ತಡೆ ಪುಣ್ಯದ ಕಾರ್ಯ

Last Updated 19 ಜೂನ್ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಇತ್ತೀಚೆಗೆ ಎರಡು ದಿನಗಳ ಅಂತರದಲ್ಲಿ ಒಂಬತ್ತು ಬಾಲ್ಯವಿವಾಹಗಳಿಗೆ ತಡೆಯೊಡ್ಡಿರುವುದು ಸಂತೋಷದ ಸಂಗತಿ. ಸಮಾಜವು ಉನ್ನತಿಯತ್ತ ಸಾಗುತ್ತಿದ್ದರೂ ಹಲವಾರು ಕಾರಣಗಳಿಂದ ಬಾಲ್ಯವಿವಾಹಕ್ಕೆ ಮುಂದಾಗುತ್ತಿರುವ ಜನರ ಮನಃಸ್ಥಿತಿಯ ಬಗ್ಗೆ ಬೇಸರವೆನಿಸುತ್ತದೆ. ಮೊಮ್ಮಕ್ಕಳ ಮದುವೆ ನೋಡ ಬೇಕೆಂಬ ಹಿರಿಯರ ಆಸೆ, ಸಮಾಜದಲ್ಲಿ ನಡೆಯುವ ಅತ್ಯಾಚಾರದ ಬಗ್ಗೆ ಹೆದರಿಕೆ, ಕುಟುಂಬದಲ್ಲಿ ಬಡತನವಿದ್ದಲ್ಲಿ ಶ್ರೀಮಂತ ವರ ಬಂದರೆ ವಯಸ್ಸಿನ ಅಂತರವನ್ನೂ ನೋಡದೆ ಮದುವೆ ಮಾಡಲು ಮುಂದಾಗುವಂತಹ ಹಲವು ಕಾರಣಗಳು ಇದರ ಹಿಂದೆ ಇರುತ್ತವೆ.

ಬಾಲ್ಯವಿವಾಹ ಮಾಡುವ ಪೋಷಕರಿಗೆ ನಂತರ ಆ ಮಕ್ಕಳು ಅನುಭವಿಸುವ ಸಂಕಷ್ಟಗಳ ಅರಿವಿರುವುದಿಲ್ಲ. ಈಗ ಕೊರೊನಾ ಸಂದರ್ಭದಲ್ಲಿ ಹಣದ ಮುಗ್ಗಟ್ಟಿನಿಂದ ಬಾಲ್ಯವಿವಾಹಗಳು ಹೆಚ್ಚಿನ ಸಂಖ್ಯೆಯಲ್ಲಿ ಜರುಗುವ ಸಂಭವವಿರುತ್ತದೆ. ಸಾರ್ವಜನಿಕರು, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು ಬಾಲ್ಯವಿವಾಹದಿಂದ ಆಗುವ ತೊಂದರೆಗಳನ್ನು ಹೆಣ್ಣುಮಕ್ಕಳಿಗೆ ವಿವರಿಸಬೇಕು. ಬಾಲ್ಯವಿವಾಹ ತಡೆಗಟ್ಟುವುದನ್ನು ಸಾರ್ವಜನಿಕರು ಒಂದು ಪುಣ್ಯದ ಕೆಲಸವೆಂದೇ ತಿಳಿದು, ಇಂತಹ ಕೃತ್ಯ ಕಂಡುಬಂದರೆ ಕೂಡಲೇ ಪೊಲೀಸ್‌ ಠಾಣೆಗೆ ದೂರು ನೀಡಬೇಕು.

ಎಂ.ಎಸ್.ಉಷಾ ಪ್ರಕಾಶ್,ಮೈಸೂರು‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT