ಧಾರವಾಡ- ಮೈಸೂರು- ಧಾರವಾಡ ಎಕ್ಸ್‌ಪ್ರೆಸ್ ರೈಲು ದಿನನಿತ್ಯ ಸಾವಿರಾರು ಪ್ರಯಾಣಿಕರನ್ನು ಎರಡೂ ನಗರಗಳಿಂದ ಕರೆದೊಯ್ಯುವ ಕಾಯಕವನ್ನು ನಿತ್ಯವೂ ಮಾಡುತ್ತಿತ್ತು. ಸಾಮಾನ್ಯ ಬೋಗಿ ಮತ್ತು ಹವಾನಿಯಂತ್ರಿತ ಬೋಗಿಗಳಲ್ಲೂ ಆಸನಗಳು ಸಿಗದೆ ಪ್ರಯಾಣಿಕರು ಪರದಾಡುತ್ತಿ
ದ್ದರು. ಕೋವಿಡ್– 19ರ ಕಾರಣವಾಗಿ ಮಾರ್ಚ್‌ನಿಂದ ತಾತ್ಕಾಲಿಕವಾಗಿ ಈ ರೈಲು ಸ್ಥಗಿತಗೊಂಡಿರುವುದರಿಂದ ಪ್ರಯಾಣಿಕರು ಬಾಡಿಗೆ ವಾಹನದಲ್ಲೋ ಅಥವಾ ಸ್ವಂತ ವಾಹನದಲ್ಲೋ ಹುಬ್ಬಳ್ಳಿ, ಧಾರವಾಡ, ಮೈಸೂರು ನಗರಗಳಿಗೆ ಹೋಗಿಬರುತ್ತಿದ್ದಾರೆ.

ಬೆಳಗಾವಿ- ಮೈಸೂರು- ಚೆನ್ನೈ ವಿಮಾನಯಾನ ಇತ್ತೀಚೆಗೆ ಹೊಸದಾಗಿ ಪ್ರಾರಂಭವಾಗಿದೆ. ಕೆಲವೇ ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣಿಸುತ್ತಿರಬಹುದು. ಸರ್ಕಾರವು ಉಳಿದ ಆಸನಗಳ ಪ್ರಯಾಣ ವೆಚ್ಚವನ್ನು ಉಡಾನ್ ಒಪ್ಪಂದದ ಅನ್ವಯ ವಿಮಾನಯಾನ ಸಂಸ್ಥೆಗೆ ವೃಥಾ ಪಾವತಿಸಬೇಕಾಗಿದೆ. ಇದಕ್ಕೆ ಪರ್ಯಾಯವಾಗಿ, ಇದೇ ವಿಮಾನವನ್ನು ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸಲು ಅವಕಾಶ ಮಾಡಿಕೊಟ್ಟರೆ ಹುಬ್ಬಳ್ಳಿ- ಧಾರವಾಡ ಪ್ರಯಾಣಿಕರಿಂದ ವಿಮಾನ ಭರ್ತಿಯಾಗಿ ಕೇಂದ್ರ ಸರ್ಕಾರಕ್ಕೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಅಲ್ಲದೆ, ಹುಬ್ಬಳ್ಳಿ- ಧಾರವಾಡ- ಮೈಸೂರು ಪ್ರಯಾಣಿಕರಿಗೆ ವಿಮಾನಯಾನದ ಸಂಪರ್ಕವನ್ನು ಕಲ್ಪಿಸಿದಂತಾಗುತ್ತದೆ. ಮೈಸೂರಿಗೆ ವಿಮಾನಯಾನ ಆರಂಭವಾದಾಗಿನಿಂದ ಇರುವ ಈ ಬೇಡಿಕೆಯನ್ನು ಈಡೇರಿಸಿದಂತೆಯೂ ಆಗುತ್ತದೆ.

- ಡಾ. ಸಿದ್ಧಲಿಂಗಸ್ವಾಮಿ ಹಿರೇಮಠ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.