ಪ್ರಜಾ ‘ಅತಂತ್ರ’ ವ್ಯವಸ್ಥೆ
ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳನ್ನು ಹರಾಜು ಕೂಗಿ, ಬೆದರಿಕೆ ಒಡ್ಡಿ ಕೊಂಡುಕೊಳ್ಳುತ್ತಿರುವ ವಿಷಯ ತಿಳಿದು ಮನಸ್ಸಿಗೆ ಆಘಾತವಾಯಿತು. ‘ನಿಜವಾದ ಪ್ರಜಾಪ್ರಭುತ್ವ ಇರಬೇಕಾದರೆ ಗ್ರಾಮಗಳಿಗೆ ಅಧಿಕಾರ ನೀಡಬೇಕು’ ಎಂದು ಗಾಂಧೀಜಿ ಹೇಳಿದ್ದರು. ಆದರೆ ಇಂದು ನಾವೆಲ್ಲಾ ಇರುವುದು ನಿಜವಾದ ಅರ್ಥವುಳ್ಳ ಪ್ರಜಾಪ್ರಭುತ್ವದ ವ್ಯವಸ್ಥೆಯ ಅಡಿಯಲ್ಲಿಯೇ? ಈಗ ಇರುವಂತಹ ವ್ಯವಸ್ಥೆಯನ್ನು ಹೀಗೇ ಬೆಳೆಯಲು ಬಿಟ್ಟರೆ ಮುಂದೊಂದು ದಿನ, ಮೂಲ ಅರ್ಥವುಳ್ಳ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅದು ನುಂಗಿಬಿಡಬಹುದು.
- ಲೋಕೇಶ್ ವೈ.ಎಂ., ಹಾಸನ
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.