ಭಾನುವಾರ, ಅಕ್ಟೋಬರ್ 24, 2021
21 °C

ದೋಷ ಸರಿಪಡಿಸಲು ಹಲ್ಲೆ ಪರಿಹಾರವೇ?

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

‘ಪಠ್ಯಪುಸ್ತಕಗಳಲ್ಲಿನ ದೋಷಗಳನ್ನು ಸಾರ್ವಜನಿಕರು ಗಂಭೀರವಾಗಿ ಗಮನಿಸಿದ್ದರೆ ಸಂಬಂಧಿಸಿದವರ ಮೇಲೆ ಹಲ್ಲೆ ನಡೆಸುತ್ತಿದ್ದರು’ ಎಂದು ಶಿಕ್ಷಣ ಸಚಿವರು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. ಆದರೆ ಅವರು ಪಠ್ಯಪುಸ್ತಕಗಳ ಯಾವ ಭಾಗಗಳಲ್ಲಿ ಅಂತಹ ದೋಷಗಳಿವೆ ಎಂಬುದನ್ನು ತಿಳಿಸಿಲ್ಲ. ಸಚಿವರ ಪ್ರಕಾರ, ದೋಷಗಳನ್ನು ಸರಿಪಡಿಸಲು ‘ಹಲ್ಲೆ’ ಪರಿಹಾರ ಎಂಬಂತಾಗಿದೆ.

ಕಳೆದ 18 ತಿಂಗಳುಗಳಿಂದ ಗ್ರಾಮೀಣ ಪ್ರದೇಶದ 1ರಿಂದ 10ನೇ ತರಗತಿಯ ಮಕ್ಕಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸುಮಾರು 25 ಲಕ್ಷ ಮಕ್ಕಳು ಆನ್‌ಲೈನ್ ಪಾಠಕ್ಕೆ ನೆಟ್‍ವರ್ಕ್ ಸಿಗದೆ ವಂಚಿತರಾಗಿದ್ದಾರೆ. ಇದುವರೆಗೆ ಈ ಸಮಸ್ಯೆಯ ಬಗ್ಗೆ ಸರ್ಕಾರ ಚಕಾರವೆತ್ತಿಲ್ಲ. ಇಲ್ಲಿನ ವಿಶೇಷವನ್ನು ಗಮನಿಸಬೇಕು. ಕಳೆದ 20-25 ತಿಂಗಳುಗಳಿಂದ ಪಠ್ಯಪುಸ್ತಕಗಳ ಬಗ್ಗೆ ವಿವಾದ ಹುಟ್ಟುಹಾಕುತ್ತಿರುವವರಲ್ಲಿ ಹೆಚ್ಚಿನವರು ಚಾತುರ್ವರ್ಣೀಯ ರಾಗಿದ್ದಾರೆ, ಏಕೆ?

- ಟಿ.ಆರ್.ಚಂದ್ರಶೇಖರ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.