ಬುಧವಾರ, ಜುಲೈ 28, 2021
29 °C

ವಾಚಕರ ವಾಣಿ | ಸಾಂಸ್ಕೃತಿಕ ಸಂಸ್ಥೆಗಳ ಮಹತ್ವ ಅರಿಯಬೇಕಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಎಂಶ್ರೀ ಪ್ರತಿಷ್ಠಾನಕ್ಕೆ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯು (ಬಿಬಿಎಂಪಿ) ₹ 2.97 ಲಕ್ಷ ಮಾಸಿಕ ನೆಲಬಾಡಿಗೆ ನಿಗದಿಪಡಿಸಿರುವುದನ್ನು ತಿಳಿದು ಕಳವಳವಾಯಿತು.

ಪ್ರತಿಷ್ಠಾನದ ಗ್ರಂಥಾಲಯ ಮೊದಲಾದವು ಸಂಶೋಧಕರಿಗೆ, ಗಂಭೀರ ಸಾಹಿತ್ಯ– ಸಂಸ್ಕೃತಿ ಅಧ್ಯಯನಕಾರರಿಗೆ ಅತಿ ಉಪಯುಕ್ತವಾಗಿವೆ. ಅಪರೂಪದ ಹಲವು ಪುಸ್ತಕಗಳು ಅಲ್ಲಿವೆ. ಅಲ್ಲಿ ನಡೆಯುವ ಕಾರ್ಯಕ್ರಮಗಳೂ ಸಾಹಿತ್ಯ, ಸಾಂಸ್ಕೃತಿಕ ಮಹತ್ವದವು. ಸಂಸ್ಕೃತಿ ಬಗ್ಗೆ ಬಹಳ ಮಾತನಾಡುವ ಮಂತ್ರಿಗಳಿಗೆ ಇದು ತಿಳಿಯಬೇಕಿತ್ತು.

ತಿಂಗಳಿಗೆ ಲಕ್ಷಗಟ್ಟಲೆ ನೆಲಬಾಡಿಗೆಯನ್ನು ಸರ್ಕಾರಕ್ಕೆ ಕಟ್ಟಿ ಇಂತಹ ಸಾಂಸ್ಕೃತಿಕ ಅಧ್ಯಯನ ಸಂಸ್ಥೆಗಳನ್ನು ನಡೆಸಲು ಸಾಧ್ಯವಿಲ್ಲ. ಈ ರೀತಿಯ ಸಂಸ್ಥೆಗಳನ್ನು ಸಹಾಯಧನ ನೀಡಿ ನಡೆಸುವುದು ಸರ್ಕಾರದ ಜವಾಬ್ದಾರಿ. ಬಿಬಿಎಂಪಿ ಅಧಿಕಾರಿಗಳು ಇಂತಹ ಸಂಸ್ಥೆಗಳ ವಿಚಾರದಲ್ಲಿ ಮುಖ್ಯಮಂತ್ರಿಯವರ ಆದೇಶವನ್ನೂ ಪಾಲಿಸದಿದ್ದಾಗ, ತಪ್ಪು ಮಾಡುತ್ತಿರುವ ಅಧಿಕಾರಿಗಳ ಕಿವಿ ಹಿಂಡಿ ಸರಿಯಾಗಿ ಕೆಲಸ ನಡೆಯುವಂತೆ ಮಾಡುವ ಜವಾಬ್ದಾರಿ ಸಂಬಂಧಿಸಿದ ಮಂತ್ರಿಗಳ ಮೇಲಿರುತ್ತದೆ. ಆದರೆ ಅವರಿಗೆ ಈ ರೀತಿಯ ಕೆಲಸಗಳು ಮಹತ್ವವಾದವು ಎಂಬ ನಂಬಿಕೆ ಇರಬೇಕು ಮತ್ತು ಅವರು ಇಂತಹ ವರದಿಗಳನ್ನು ಓದಿ ಕಾರ್ಯಪ್ರವೃತ್ತರಾಗಬಲ್ಲವರೂ ಆಗಿರಬೇಕು.
-ಎಸ್‌.ಆರ್‌.ವಿಜಯಶಂಕರ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು