ಒಣ ಪ್ರತಿಷ್ಠೆ, ಬಲಾಬಲ ಪ್ರದರ್ಶನ
ಕೊರೊನಾದ ಇಂದಿನ ಸಂಕಷ್ಟ ಪರಿಸ್ಥಿತಿಯಲ್ಲೂ ಜನಪ್ರತಿನಿಧಿಗಳಿಗೆ ಸನ್ಮಾನ ಮಾಡುವ, ಅದರಲ್ಲೂ ಚಿನ್ನದ ಕಿರೀಟ, ಕತ್ತಿ, ಗದೆ ಮುಂತಾದವನ್ನು ಜನಸಾಮಾನ್ಯರು ಕೊಡುವ ಔಚಿತ್ಯ ಏನೆಂದು ಅರ್ಥವಾಗುತ್ತಿಲ್ಲ.
ಒಂದು ವೇಳೆ ಮಹತ್ವವಾದ ಕೆಲಸಗಳನ್ನು ಮಾಡಿದ್ದರೂ ತಮ್ಮ ಅಭಿಮಾನಿಗಳು ಎಂದು ಕರೆದುಕೊಳ್ಳುವವರು ಎಷ್ಟೇ ಒತ್ತಾಯ ಮಾಡಿದರೂ ಜನನಾಯಕರು ಮನಸ್ಸು ಮಾಡಿದರೆ ಇಂತಹ ಪ್ರಹಸನ ನಡೆಯದಂತೆ ನೋಡಿಕೊಳ್ಳಬಹುದು. ಕೇವಲ ತಮ್ಮ ಒಣ ಪ್ರತಿಷ್ಠೆಗೆ ಹಾಗೂ ಬಲಾಬಲ ಪ್ರದರ್ಶಿಸುವ ಈ ಪದ್ಧತಿಗೆ ಮಂಗಳ ಹಾಡಬೇಕಿದೆ.
–ಕಡೂರು ಫಣಿಶಂಕರ್, ಬೆಂಗಳೂರು
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.