ಸೋಮವಾರ, ಆಗಸ್ಟ್ 2, 2021
26 °C

ವಾಚಕರ ವಾಣಿ | ಸಾರಿಗೆ ಕಟ್ಟಡ: ಸೌರ ವಿದ್ಯುತ್‌ಗೆ ಇರಲಿ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್‌ಗಳಿಗಾಗಿ ಪ್ರಯಾಣಿಕರು ಕಾಯಲು ಹೋಬಳಿ, ತಾಲ್ಲೂಕು, ಜಿಲ್ಲಾ, ವಿಭಾಗ ಮಟ್ಟದಲ್ಲಿ ಬಸ್ ನಿಲ್ದಾಣಗಳನ್ನು, ಮಹಾನಗರಗಳಲ್ಲಿ ನಗರ ಸಾರಿಗೆ ಬಸ್ ಪ್ರಯಾಣಿಕರಿಗಾಗಿ ತಂಗುದಾಣಗಳನ್ನು ಕಟ್ಟಲಾಗಿದೆ. ಬಸ್‌ಗಳ ರಿಪೇರಿ, ನಿರ್ವಹಣೆಗಾಗಿ ರಾಜ್ಯದಾದ್ಯಂತ ಬಸ್ ಡಿಪೊಗಳನ್ನು ನಿರ್ಮಿಸಲಾಗಿದೆ. ಇವೆಲ್ಲವೂ ಕಾಂಕ್ರೀಟ್‌ ಕಟ್ಟಡಗಳಾಗಿದ್ದು, ಇವುಗಳ ಮೇಲ್ಭಾಗದಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ ಸಾರಿಗೆ ಇಲಾಖೆ ಮುಂದಾಗುವುದು ವ್ಯಾವಹಾರಿಕವಾಗಿ ಲಾಭದಾಯಕವಾಗುತ್ತದೆ.

ಇಲ್ಲಿ ಉತ್ಪಾದನೆಯಾಗುವ ಸೌರ ವಿದ್ಯುತ್ ಅನ್ನು ನಿಲ್ದಾಣದ ಡಿಪೊಗಳ ನಿರ್ವಹಣೆಗೆ ಬೇಕಾದಷ್ಟು ಬಳಸಿಕೊಂಡು, ಹೆಚ್ಚುವರಿ ವಿದ್ಯುತ್ ಅನ್ನು ವಿದ್ಯುತ್ ನಿಗಮಕ್ಕೆ ಪೂರೈಸಬಹುದು.
-ಬಸವರಾಜ ಹುಡೇದಗಡ್ಡಿ, ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.