ಸೋಮವಾರ, ಜನವರಿ 27, 2020
22 °C

ಅರಣ್ಯವಾಸಿಗಳ ಅಸ್ತಿತ್ವ: ಉತ್ತರ ಸಿಗದ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ಪಶ್ಚಿಮಘಟ್ಟ ಪ್ರದೇಶದಲ್ಲಿ ಕಸ್ತೂರಿ ರಂಗನ್ ವರದಿಯ ಶಿಫಾರಸು ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿರೋಧ ವ್ಯಕ್ತವಾಗುತ್ತಿದೆ. ಅರಣ್ಯದ ಸೆರಗಿನಂಚಿನಲ್ಲಿ ತಲೆತಲಾಂತರದಿಂದ ವಾಸಿಸುತ್ತಿರುವ ಜನರ ಬದುಕಿನ ಪ್ರಶ್ನೆಗೆ ಸಂಬಂಧಿಸಿದಂತೆ, ವರದಿ ಸಿದ್ಧಪಡಿಸಿದವರಲ್ಲಾಗಲೀ ಅದನ್ನು ಅನುಷ್ಠಾನ ಮಾಡಹೊರಟ ಕೇಂದ್ರ ಸರ್ಕಾರದ ಬಳಿಯಾಗಲೀ ಉತ್ತರ ಇಲ್ಲದಿರುವುದು ಬೇಸರದ ಸಂಗತಿ.

ಕಾಡು ಉಳಿಯಬೇಕು. ಇದು ಅನಿವಾರ್ಯ ಮತ್ತು ಅಗತ್ಯ ಕೂಡ. ಆದರೆ, ಕಾಡಿನಂಚಿನಲ್ಲಿ ವಾಸಿಸುತ್ತಿರುವವರಿಗೂ ಬದುಕುವ ಹಕ್ಕಿದೆ, ಅವರೂ ಮೂಲ ಸೌಕರ್ಯ ಪಡೆಯಲು ಅರ್ಹರು ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗಿದೆ. ಅರಣ್ಯದ ಪ್ರಮಾಣ ಒಂದಿಷ್ಟಾದರೂ ಉಳಿದಿದೆ ಎನ್ನುವುದಾದರೆ ಅದು ಇಂತಹವರಿಂದಲೇ ಎನ್ನುವ ಸತ್ಯವನ್ನು ಮರೆಯಬಾರದು.

-ಬಾಬು ಶಿರಮೋಜಿ, ಬೆಳಗಾವಿ

ಪ್ರತಿಕ್ರಿಯಿಸಿ (+)