ಸರ್ಕಾರಿ ಕಚೇರಿಗಳಲ್ಲಿ ಕಡತಗಳ ಬೆಟ್ಟ ಕರಗಿಸಿ, ಆಡಳಿತಕ್ಕೆ ಚುರುಕು ಮುಟ್ಟಿಸಬೇಕು ಎಂಬ ಆಶಯ ಹೊಂದಿದ ಸಂಪಾದಕೀಯ (ಪ್ರ.ವಾ., ಫೆ. 25) ಪ್ರಸ್ತುತ ಸ್ಥಿತಿಗೆ ಕನ್ನಡಿ ಹಿಡಿದಿದೆ. ಆಡಳಿತವು ಮಂದಗತಿಯಲ್ಲಿ ಸಾಗುವುದಕ್ಕೆ ನಾನಾ ಕಾರಣಗಳಿರುತ್ತವೆ. ಇವುಗಳಲ್ಲಿ ಪ್ರಮುಖವಾದುದು ಸಿಬ್ಬಂದಿ ಕೊರತೆ. ಇದು, ಎಲ್ಲ ಇಲಾಖೆಗಳಲ್ಲೂ ಇದೆ.

ಸರ್ಕಾರವು ಕಾಲಕಾಲಕ್ಕೆ ನೇಮಕಾತಿಯನ್ನು ಮಾಡದೇ ಇರುವುದರಿಂದ ಆಡಳಿತವು ಆಮೆಗತಿಯ ನಡಿಗೆಯಾಗಿದೆ. ಉದಾಹರಣೆಗೆ, ಕರ್ನಾಟಕ ಆಡಳಿತ ಸೇವೆಯ ಉನ್ನತ ಹುದ್ದೆಗಳಿಗೆ ಕೆಪಿಎಸ್‌ಸಿ ನಡೆಸುವ ನೇಮಕಾತಿ ಪ್ರಕ್ರಿಯೆಯು ಪಂಚವಾರ್ಷಿಕ ಯೋಜನೆಯ ರೀತಿ ಸಾಗಿದೆ. ಗೆಜೆಟ್ ನೋಟಿಫಿಕೇಷನ್ ಹೊರಬಿದ್ದ ಬಳಿಕ, ಆ ಪ್ರಕ್ರಿಯೆ ಪೂರ್ಣಗೊಳ್ಳಲು ಹಲವು ವರ್ಷಗಳೇ ಬೇಕಾಗುತ್ತದೆ. ಇಂತಹ ತೊಡಕುಗಳ ನಿವಾರಣೆಗೆ ಸರ್ಕಾರ ಗಮನಹರಿಸಬೇಕು. ಸಿಬ್ಬಂದಿ ನೇಮಕಾತಿಯು ಕಾಲಕಾಲಕ್ಕೆ ಆಗುವ ರೀತಿ ವ್ಯವಸ್ಥೆ ರೂಪಿಸಬೇಕು.

-ಪುನೀತ್ ಎನ್.,ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.