ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರು ರೆಸಾರ್ಟ್ ಸ್ಥಾಪಿಸಿದ್ದರೆ...

Last Updated 9 ಜುಲೈ 2019, 19:45 IST
ಅಕ್ಷರ ಗಾತ್ರ

ಕರ್ನಾಟಕದ ಶಕ್ತಿಕೇಂದ್ರವಾದ ವಿಧಾನಸೌಧಕ್ಕೆ ತನ್ನದೇ ಆದ ಗೌರವ ಇದೆ. ಅಖಂಡ ಕರ್ನಾಟಕದ ಆಡಳಿತಾತ್ಮಕ ಸ್ಥಳವಾದ ಇದು, ಇಂದು ತನ್ನ ಗೌರವವನ್ನು ಕಳೆದುಕೊಳ್ಳುತ್ತಿದೆ. ಇದಕ್ಕೆ ಕಾರಣ ಇಂದಿನ ವಚನಭ್ರಷ್ಟ, ಸ್ವಾರ್ಥ ರಾಜಕಾರಣಿಗಳು. ಚುನಾವಣಾ ಟಿಕೆಟ್‍ಗಾಗಿ ಪರಿತಪಿಸಿ, ಗೆದ್ದ ಮೇಲೆ ನಿಷ್ಠೆಯಿಂದ ಅಧಿಕಾರ ನಡೆಸದೆ ರೆಸಾರ್ಟ್‌ಗಳಲ್ಲಿಯೇ ಅವರು ಹೆಚ್ಚಾಗಿ ಕಾಲ
ಕಳೆಯುತ್ತಿದ್ದಾರೆ. ಇದು ದುರಂತಮಯ.

ತಮ್ಮ ಈ ಆಟಕ್ಕೆ ಕ್ಷೇತ್ರದ ಅಭಿವೃದ್ಧಿ, ಜನರ ಸಮಸ್ಯೆಗಳನ್ನು ಮುಂದಿಡುವುದು ವಿಪರ್ಯಾಸ. ಅವುಗಳೇ ನಿಜವಾದ ಕಾರಣವಾಗಿದ್ದರೆ, ಈ ಶಕ್ತಿ ಕೇಂದ್ರದಲ್ಲಿಯೇ ಕುಳಿತು ಏಕೆ ಆ ಬಗ್ಗೆ ಚರ್ಚಿಸಲು ಮುಂದಾಗುವುದಿಲ್ಲ? ಇಲ್ಲವಾದರೆ, ತಮ್ಮ ಕ್ಷೇತ್ರಗಳಲ್ಲಿ ಬಹಿರಂಗ ಸಮಾರಂಭಗಳನ್ನು ನಡೆಸಿ, ತಮ್ಮ ಸಂಕಷ್ಟಗಳನ್ನು ಜನರ ಮುಂದಿಡಲಿ. ಆಗ ಜನರಿಗೂ ಸತ್ಯಾಸತ್ಯತೆ ಏನೆಂಬುದು ತಿಳಿಯುತ್ತದೆ.

ಚುನಾವಣೆಗೆ ಮೊದಲು ‘ಕ್ಷೇತ್ರದ ಜನರೇ ನಮ್ಮ ದೇವರು’ ಎನ್ನುತ್ತ ಪ್ರತಿ ಮನೆ, ಹಳ್ಳಿಹಳ್ಳಿಗೂ ತೆರಳುವ ಇವರು, ಗೆದ್ದ ನಂತರ ಅತ್ತ ಸುಳಿಯುವುದೇ ಇಲ್ಲ. ಹಳ್ಳಿಗಳಲ್ಲಿ ಬಡವರು ರೆಸಾರ್ಟ್ ಸ್ಥಾಪಿಸಿದ್ದರೆ ಬರುತ್ತಿದ್ದರೋ ಏನೋ?
-ಮಹದೇವಪ್ಪ ಪಿ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT