ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಸಿಸಿ ‍‍ಪ್ರಮಾಣಪತ್ರಕ್ಕೆ ಇರಲಿ ಕಿಮ್ಮತ್ತು

ಅಕ್ಷರ ಗಾತ್ರ

ರಾಜ್ಯದ ಆಯ್ದ 75 ಸರ್ಕಾರಿ ಶಾಲೆಗಳನ್ನು ‘ನೇತಾಜಿ ಅಮೃತ ಶಾಲೆಗಳು’ ಎಂದು ಘೋಷಿಸಿ, ಈ ಶಾಲೆಗಳಲ್ಲಿ ಎನ್‌ಸಿಸಿ ಘಟಕಗಳನ್ನು ಸ್ಥಾಪಿಸುವ ಸರ್ಕಾರದ ನಿರ್ಧಾರ (ಪ್ರ.ವಾ., ಜ. 26) ಸ್ವಾಗತಾರ್ಹ. ಆದರೆ ಈ ಯೋಜನೆಯು ವಿದ್ಯಾರ್ಥಿಗಳಿಗೆ ಉಪಯೋಗಕ್ಕೆ ಬರುವಂತೆ ಆಗಬೇಕು. ನಾನು ಮಾಧ್ಯಮಿಕ ಶಾಲೆಯಿಂದ ಪದವಿವರೆಗೂ ಎನ್‌ಸಿಸಿ ತರಬೇತಿ ಪಡೆದೆ. ಆದರೆ ಸೈನಿಕ ಹುದ್ದೆಗೆಂದು ಸಂದರ್ಶನಕ್ಕೆ ಹೋದಾಗ ಎನ್‌ಸಿಸಿ ಪ್ರಮಾಣಪತ್ರವನ್ನು ಹತ್ತಿರ ಕೂಡ ಸೇರಿಸಲಿಲ್ಲ. ಇಂತಹ ತರಬೇತಿಯು ಉಪಯೋಗಕ್ಕೆ ಬಾರದಿದ್ದರೆ ಯಾವ ಮಹತ್ಸಾಧನೆಗಾಗಿ ಅದಕ್ಕೆ ಕೋಟ್ಯಂತರ ರೂಪಾಯಿ ವ್ಯಯಿಸಬೇಕು? ‌

ಸೈನಿಕ ಹುದ್ದೆಯ ಸಂದರ್ಶನದಲ್ಲಿ ಎತ್ತರದ ಪ್ರಶ್ನೆಯೂ ಎದುರಾಯಿತು. ಆದ್ದರಿಂದ ಇನ್ನು ಮುಂದೆ ಎನ್‌ಸಿಸಿಗೆ ವಿದ್ಯಾರ್ಥಿಗಳ ಎತ್ತರ, ಪರ್ಸನಾಲಿಟಿ ಎಲ್ಲವನ್ನೂ ಪರಿಶೀಲಿಸಿ, ಮುಂದೆ ಅಂತಹ ಹುದ್ದೆಗಳಿಗೆ ತಕ್ಕ ಮಟ್ಟಿಗಾದರೂ ಸರಿಹೊಂದುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವುದು ಸರಿಯಾದ ಕ್ರಮವಾಗಬಹುದು. ಅಲ್ಲದೆ ಕೆಲಸಕ್ಕಾಗಿ ಸಂದರ್ಶನಕ್ಕೆ ಹೋದಾಗ ಎನ್‌ಸಿಸಿ ಪ್ರಮಾಣಪತ್ರವನ್ನು ಪರಿಗಣಿಸುವಂತೆ ಮಾಡುವುದು ಸೂಕ್ತ.

- ಬಾಲಕೃಷ್ಣ ಎಂ.ಆರ್.,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT